ನ್ಯೂಸ್

VIDEO | ಮದ್ಯಪ್ರಿಯನಿಗೆ ಕೈತುಂಬಾ ಹಣ ಕೊಟ್ಟ ಜಮೀರ್​ ಅಹ್ಮದ್​​ ಖಾನ್

ವಿಜಯನಗರ: ಹೊಸಪೇಟೆಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್​ ಅಹ್ಮದ್​​ ಖಾನ್​​ ಅವರು ಮದ್ಯಪ್ರಿಯನಿಗೆ ಗರಿಗರಿಯಾದ 500ರೂ. ಮುಖ ಬೆಲೆಯ ನೋಟುಗಳನ್ನು ಕೊಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕಾರದ ವೇಳೆ, ಜನ ಸಾಮಾನ್ಯರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬಂದು ಕೆಲವು ಮನವಿಯನ್ನು ಸಲ್ಲಿಸಿದ್ದಾರೆ. ಈ ವೇಳೆ ಜಮೀರ್​ ಅಹ್ಮದ್​​ ಖಾನ್ ಅವರು ಮನವಿ ಸ್ವೀಕರಿಸುವುದರ ಜತೆಗೆ ತಮ್ಮ ಕೈಲಾದಷ್ಟು ಹಣವನ್ನು ನೀಡಿ ಸಹಾಯ ಮಾಡಿದ್ದಾರೆ.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕಾರದ ವೇಳೆ ಸರತಿ ಸಾಲಿನಲ್ಲಿ ಬಂದ ಮದ್ಯಪ್ರಿಯ, ಮದ್ಯಪ್ರಿಯನನ್ನ ಕಂಡು ಓಯ್ ಎಂದು ಕೂಗಿದ ಸಚಿವರು, ಬಳಿಕ ಮಾಧ್ಯಮದವರನ್ನ ನೋಡುತ್ತಲೇ ಜೇಬಿನಿಂದ ಹಣ ಗರಿಗರಿಯಾದ ನೋಟು ತೆಗೆದು ಕೊಟ್ಟಿದ್ದಾರೆ. ಸಚಿವರು ಹಣ ನೀಡುತ್ತಲೇ ಮದ್ಯಪ್ರಿಯ ನಗುಮೋಗದಲ್ಲಿ ಹೋಗಿರುವ ವಿಡಿಯೋ ವೈರಲ್​​ ಆಗಿದೆ.

ಸಮಸ್ಯೆ ಹೇಳಿಕೊಂಡು ಬಂದ ವೃದ್ಧೆಗೆ ಸ್ಪಂದಿಸಿದ ಜಮೀರ್ ಅವರು, ವೃದ್ಧೆಗೆ ಕಂತೆ, ಹಣ ನೀಡಿದ್ದಾರೆ. ಸಚಿವರ ಕೈಹಿಡಿದು ಕೈ ಮುಗಿದ ವೃದ್ಧೆ ಸಚಿವ ಜಮೀರ್ ಮಾನವೀಯತೆಗೆ ಕಣ್ಣೀರು ಹಾಕಿದ್ದಾಳೆ. ಶಾಸಕರಾದ ಗವಿಯಪ್ಪ, ಕೂಡ್ಲಿಗಿ ಶ್ರೀನಿವಾಸ್, ಹರಪನಹಳ್ಳಿ ಶಾಸಕಿ ಲತಾ ಎದುರೇ ಹಣ ಕೊಟ್ಟಿದ್ದಾರೆ ಜಮೀರ್.