ಮದುವೆಯ ಬಳಿಕವೂ ನಟನೆಯಲ್ಲಿ ಬಿಜಿಯಿರುವ ಬಾಲಿವುಡ್ ನಟಿಯರಲ್ಲಿ ಕಿಯಾರಾ ಅಡ್ವಾನಿ ಪ್ರಮುಖರು. ಕಳೆದ 2023ರ ೆಬ್ರವರಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಜತೆ ಸಪ್ತಪದಿ ತುಳಿದ ಕಿಯಾರಾ, ಅದೇ ವರ್ಷ ಜೂನ್‌ನಲ್ಲಿ ರಿಲೀಸ್ ಆದ ‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲಿ ಬೋಲ್ಡ್ ಅವತಾರದಲ್ಲಿ ಮಿಂಚಿದ್ದರು. ಸದ್ಯ ‘ಆರ್‌ಆರ್‌ಆರ್’ ಸಕ್ಸಸ್ ಬಳಿಕ ರಾಮಚರಣ್ ತೇಜಾ ನಾಯಕನಾಗಿರುವ ‘ಗೇಮ್ ಚೇಂಜರ್’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಶಂಕರ್ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಿಯಾರಾ, ರಾಮ್‌ಗೆ ಜೋಡಿಯಾಗಿದ್ದಾರೆ. ಬುಧವಾರ ಕಿಯಾರಾ 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ‘ಗೇಮ್ ಚೇಂಜರ್’ ಚಿತ್ರತಂಡ ನಟಿಗೆ ಹೊಸ ಪೋಸ್ಟರ್ ಉಡುಗೊರೆ ನೀಡಿದೆ. ಚಿತ್ರದಲ್ಲಿ ಕಿಯಾರಾ ‘ಜಾಬಿಲಮ್ಮ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು, ಕುತೂಹಲ ಮೂಡಿಸಿದೆ. ಈಗಾಗಲೇ ‘ಗೇಮ್ ಚೇಂಜರ್’ ಚಿತ್ರದ ‘ಜರಗಂಡಿ’ ಹಾಡು ಬಿಡುಗಡೆಯಾಗಿದ್ದು, ರಾಮಚರಣ್ ಮತ್ತು ಕಿಯಾರಾ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆದಿದೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ‘ಗೇಮ್ ಚೇಂಜರ್’ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಆ ಬಳಿಕ ಕಿಯಾರಾ ಯಶ್ ಜತೆ ‘ಟಾಕ್ಸಿಕ್’, ಹೃತಿಕ್ ರೋಷನ್ ಮತ್ತು ಜೂ. ಎನ್‌ಟಿಆರ್ ಜತೆ ‘ವಾರ್ 2’ ಮತ್ತು ರಣವೀರ್ ಸಿಂಗ್‌ಗೆ ನಾಯಕಿಯಾಗಿ ‘ಡಾನ್ 3’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್