ನ್ಯೂಸ್

ಈ ಹುಡುಗಿಯಿಂದಲೇ ಚಾಹಲ್-ಧನಶ್ರೀ ದೂರ..ದೂರ! ಯುವತಿಯೊಬ್ಬಳ ಜತೆ ಕ್ಯಾಮರಾ ಕಣ್ಣಿಗೆ ಬಿದ್ದ ಕ್ರಿಕೆಟಿಗ Yuzvendra Chahal

 ಮುಂಬೈ:   (Yuzvendra chahal) ಕಳೆದ ಕೆಲವು ದಿನಗಳಿಂದ ಟೀಮ್​​ ಇಂಡಿಯಾದ ಸ್ಟಾರ್ ಸ್ಪಿನ್ನರ್​ ಯುಜುವೇಂದ್ರ ಚಾಹಲ್ ಹಾಗೂ ಅವರ ಪತ್ನಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್​ ಧನಶ್ರೀ ವರ್ಮಾ ವಿಚ್ಛೇದನದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಜೋಡಿ ಸದ್ಯದಲ್ಲೇ ವಿಚ್ಛೇದನ ಪಡೆಯಲಿದೆಯಂತೆ. ಆದರೆ, ಈ ಸುದ್ದಿಗೆ ಚಾಹಲ್​ ಆಗಲಿ ಧನಶ್ರೀ ಆಗಲಿ ಇದುವರೆಗೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈನ ಕುರಿತಾದ ಸುದ್ದಿಗೆ ಪೂರಕವಾಗಿಯೇ ಕೆಲವು ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ವಿಚ್ಛೇದನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಭಾರಿ ಚರ್ಚೆ ಆಗುತ್ತಿರುವ ಸಮಯದಲ್ಲೇ ಚಾಹಲ್ ಅವರು​ ಮದ್ಯದ ಅಮಲಿನಲ್ಲಿ ತೂರಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಇದೀಗ ಚಾಹಲ್  ಬೇರೆ ಹುಡುಗಿ ಜತೆ ಸುತ್ತಾಡುತ್ತೀರುವ ವೀಡಿಯೋವೊಂದು  ಮುನ್ನೆಲೆಗೆ ಬಂದಿದೆ.

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ಮೊದಲ ಭೇಟಿಯು ಲಾಕ್‌ಡೌನ್ ಸಮಯದಲ್ಲಿ ನಡೆಯಿತು. ಚಾಹಲ್ ತನ್ನನ್ನು ಡ್ಯಾನ್ಸ್ ಕಲಿಯಲು ಸಂಪರ್ಕಿಸಿದ್ದಾಗಿ ಧನಶ್ರೀ ರಿಯಾಲಿಟಿ ಶೋವೊಂದರಲ್ಲಿ ಹೇಳಿದ್ದಾರೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತ್ತು. ಚಹಾಲ್ ಮತ್ತು ಧನಶ್ರೀ ಡಿಸೆಂಬರ್ 2020 ರಲ್ಲಿ ಅದ್ಧೂರಿಯಾಗಿ ವಿವಾಹವಾದರು.

 ಆದರೆ ಇತ್ತೀಚೆಗೆ ಚಾಹಲ್ ತನ್ನ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂಬ ವರದಿಗಳು ಬಂದಿದ್ದವು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರೂ ಅನ್‌ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ, ಧನಶ್ರೀಗೆ ಸಂಬಂಧಿಸಿದ ಫೋಟೋಗಳನ್ನೂ ಚಾಹಲ್ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದಾರೆ. ಅಂದಿನಿಂದ ಅವರ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ, ಈ ವಿಷಯದ ಬಗ್ಗೆ ಇಬ್ಬರೂ ಇದುವರೆಗೂ ಮಾತನಾಡಿಲ್ಲ.  ಯುಜ್ವೇಂದ್ರ ಚಾಹಲ್  ಹುಡುಗಿಯೊಬ್ಬಳ ಜತೆ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ಕಣ್ಣಿಗೆ ಬಂದಾಗ ಚಾಹಲ್‌ನ ಮುಖವು ಮರೆಮಾಚುತ್ತದೆ.

ಮುಂಬೈನ ಜುಹುದಲ್ಲಿ ಚಾಹಲ್  ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾನೆ. ಚಾಹಲ್ ಒಬ್ಬ ಹುಡುಗಿಯೊಂದಿಗೆ ಕಾರಿನಲ್ಲಿ ಕಾಣಿಸಿಕೊಂಡಿದ್ದಾನೆ. ಮಾಧ್ಯಮದ ಕ್ಯಾಮರಾಗಳು ಆತನನ್ನು ಸೆರೆಹಿಡಿಯಲು ಪ್ರಯತ್ನಿಸಿದಾಗ, ತನ್ನ ಮುಖವನ್ನು ಮರೆಮಾಡಿದನು. ಅಂದಿನಿಂದ ಧನಶ್ರೀ ಮತ್ತು ಚಹಾಲ್ ವಿಚ್ಛೇದನದ ಸುದ್ದಿಗೆ ಈ ಮಿಸ್ಟರಿ ಗರ್ಲ್ ಕಾರಣವೇ ಎಂಬ ಚರ್ಚೆಗಳು ನಡೆಯುತ್ತಿವೆ.

2023 ರಲ್ಲಿ, ಧನಶ್ರೀ ವರ್ಮಾ ಇನ್​ಸ್ಟಾಗ್ರಾಮ್​​ನಿಂದ ಚಹಲ್ ಎಂಬ ಕೊನೆಯ ಹೆಸರನ್ನು ತೆಗೆದುಹಾಕಿದರು.  ಹೊಸ ಜೀವನ ಬರಲಿದೆ ಎಂದು ಬರೆಯಲಾಗಿದೆ. ಆಗಲೂ ಇವರಿಬ್ಬರ ಸಂಬಂಧದ ಬಗ್ಗೆ ನಾನಾ ಚರ್ಚೆಗಳು ನಡೆದಿದ್ದವು. ಇಬ್ಬರು ವಿಚ್ಛೇದನಕ್ಕೆ ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.