ನ್ಯೂಸ್

ತಮ್ಮ ​ ಬಯೋಪಿಕ್​​ ಮಾಡಲು ಬಾಲಿವುಡ್​ನ ಸ್ಟಾರ್​​ ನಟನ ಹೆಸರು ಸೂಚಿಸಿದ ಯುವಿ..!

ಯುವರಾಜ್​ ಸಿಂಗ್​ 2007ರ ವಿಶ್ವ ಕಪ್​​ ಪಂದ್ಯದಲ್ಲಿ ಒಂದು ಓವರ್​ಗೆ ಆರು ಸಿಕ್ಸರ್​​​ಗಳನ್ನ ಭಾರಿಸಿ ಹೆಸರುವಾಸಿಯಾಗಿದ್ದವರು. ಯುವರಾಜ್​ ಸಿಂಗ್​​ ತದನಂತರದಲ್ಲಿ ಕ್ಯಾನ್ಸರ್​​​ನಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಡಿ ತಾವು ಮತ್ತಷ್ಟು ಶಕ್ತಿಶಾಲಿ ಅನ್ನೋದನ್ನ ಸಾಭೀತು ಪಡಿಸಿದವರು.

ಯುವರಾಜ್​ ಸಿಂಗ್​ರವರ ಜೀವನ ಕಥೆ ಬಯೋಪಿಕ್​​​ಗೆ ಯೋಗ್ಯವಾಗಿದೆ ಅಂದ್ರೆ ತಪ್ಪಾಗೋದಿಲ್ಲ. ಇದೀಗ ಯುವರಾಜ್​ ಸಿಂಗ್​ ಅವರಿಗೆ ತಮ್ಮ ಜೀವನ ಚರಿತ್ರೆಯ ಕಥೆಯನ್ನ ಯಾರು ನಟಿಸೋದು ನಿಮಗಿಷ್ಟ ಎಂಬ ಪ್ರಶ್ನೆಯನ್ನ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಯುವರಾಜ್​ ಸಿಂಗ್​, ಪ್ರತಿಭಾವಂತ ನಟರೊಬ್ಬರ ಹೆಸರನ್ನ ಹೇಳಿದ್ದಾರೆ.

ತನ್ನ ಜೀವನಚರಿತ್ರೆಯ ಕಥೆಯನ್ನ ನಟಿಸೋಕೆ ಯಾವ ನಟ ಸರಿಯಾದ ಆಯ್ಕೆ ಎಂದು ಹಂಚಿಕೊಂಡ ರಣಬೀರ್ ಕಪೂರ್, "ನಾನು ಇತ್ತೀಚೆಗೆ ಅನಿಮಲ್ ಅನ್ನು ವೀಕ್ಷಿಸಿದ್ದೇನೆ. ನನ್ನ ಜೀವನಚರಿತ್ರೆಗೆ ರಣಬೀರ್ ಕಪೂರ್ ಸೂಕ್ತ ಎಂದು ನಾನು ಭಾವಿಸುತ್ತೇನೆ.

ಆದರೆ ಅಂತಿಮವಾಗಿ ಇದು ನಿರ್ದೇಶಕರ ಕರೆ. ಈಗಾಗಲೇ ಚಿತ್ರಕ್ಕೆ ಬೇಕಾದ ಅಂಶಗಳ ಬಗ್ಗೆ ನಾವು ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಅಪ್ಡೇಟ್​ ಕೊಡಲಿದ್ದೇವೆ ಎಂದು ಯುವರಾಜ್​ ಸಿಂಗ್​ ಹೇಳಿದ್ದಾರೆ.

ಅನಿಮಲ್‌ ಚಿತ್ರ ಈಗಾಗಲೇ ಗಲ್ಲಾಪೆಟ್ಟಿಗೆಯಲ್ಲಿ ಅನೇಕ ದಾಖಲೆಗಳನ್ನ ಮುರಿದಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ತ್ರಿಪ್ಥಿ ಡಿಮ್ರಿ ಶಕ್ತಿ ಕಪೂರ್, ಪ್ರೇಮ್ ಚೋಪ್ರಾ, ಸುರೇಶ್ ಒಬೆರಾಯ್ ಮತ್ತು ಅನೇಕ ಪ್ರತಿಭಾವಂತ ನಟರು ನಟಿಸಿದ್ದಾರೆ.

ಅನಿಮಲ್​​ ಚಿತ್ರ ರಣ್​ಬೀರ್​​​ ನಟನಾ ಜೀವನದಲ್ಲಿ ಯಶಸ್ವಿ ದಾಖಲೆಯನ್ನ ಮಾಡಿದ್ದು, ಇದರಲ್ಲಿ ರಣ್​ಬೀರ್​​ ವಿಭಿನ್ನ ಶೇಡ್​​​​ನಲ್ಲಿ ಕಾಣಿಸಿಕೊಂಡಿದ್ದಾರೆ.