ಬೆಂಗಳೂರು: ಸ್ವಾಮಿ ವಿವೇಕಾನಂದ ಜಯಂತಿ ಜನವರಿ 12ರಂದು ಯುವನಿಧಿ ಯೋಜನೆಗೆ ಚಾಲನೆ ಕೊಡಲು ನಿರ್ಧರಿಸಿರುವ ಸರ್ಕಾರ, ಅಂದು ಶಿವಮೊಗ್ಗದಲ್ಲಿ ಒಂದು ಲಕ್ಷ ಯುವಕರ ಸಮಾವೇಶ ನಡೆಸಲು ನಿರ್ಧರಿಸಿದೆ. ಮಂಗಳವಾರ ವಿಧಾನ ಸೌಧದಲ್ಲಿ ಯುವ ನಿಧಿ ನೋಂದಣಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವೇಕಾನಂದ ಜಯಂತಿಯನ್ನು ಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದರು. ಜತೆಗೆ ಸರ್ಕಾರದಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳುತ್ತೇವೆ, ಹೈದ್ರಾಬಾದ್ ಕರ್ನಾಟಕದ ಖಾಲಿ ಹುದ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡುತ್ತೇವೆ ಎಂದು ಇದೇ ವೇಳೆ ಭರವಸೆ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತನಾಡಿ, ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಐದನೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತಿದ್ದು ಯುವ ನಿಧಿಯಿಂದ ಯುವಕರ ಸಮಸ್ಯೆಗೆ ದನಿಯಾಗುತ್ತಿದ್ದೇವೆ ಎಂದು ಹೇಳಿದರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕಾರ್ಯಕ್ರಮದ ವಿಚಾರವಾಗಿ ನಮ್ಮ ರಾಷ್ಟ್ರೀಯ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ. ನಮಗೆ ಅಧಿಕಾರ ಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡಿದ್ದೇವೆ ಎಂದರು. ಶಿವಮೊಗ್ಗದಲ್ಲಿ ಆಯೋಜಿಸುವ ಒಂದು ಲಕ್ಷ ಯುವಕರ ಸಮಾವೇಶಕ್ಕೆ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ವಾಡ್ರಾ ಅವರನ್ನು ಕರೆತರುವ ಪ್ರಯತ್ನ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಯುವ ನಿಧಿ ಲಾನುಭವಿಗಳಿಗೆ ಕೇವಲ ಹಣ ನೀಡುವುದಲ್ಲದೇ ಕೌಶಲ್ಯ ನೀಡುವ ವ್ಯವಸ್ಥೆಯೂ ಆಗಲಿದೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಇದೇ ವೇಳೆ ತಿಳಿಸಿದ್ದಾರೆ.
ಇ-ಆಡಳಿತ ಇಲಾಖೆ ಯುವನಿಧಿಗಾಗಿ ಅಪ್ಲಿಕೇಶನ್‌ಅನ್ನು ಅಭಿವೃದ್ಧಿಪಡಿಸಿದೆ. ಇದನ್ನು ಎನ್‌ಐಸಿಯ ನೆರವಿನಿಂದ ಸೇವಾಸಿಂಧು ವೇದಿಕೆಯ ಮೂಲಕ ಬಳಕೆ ಮಾಡಲಾಗುತ್ತದೆ. ಇಲ್ಲಿ ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡಲಾಗಿದೆ.
ರಾಷ್ಟ್ರೀಯ ಶೈಕ್ಷಣಿಕ ಡಿಪಾಸಿಟರಿ (ನಾಡ್) ಕೋಶದ ಮೂಲಕ 4.2 ಲಕ್ಷ ನೋಂದಾಯಿಸಿದ ವಿದ್ಯಾರ್ಥಿಗಳ ಪೈಕಿ 1.5 ಲಕ್ಷ ಅರ್ಹ ಫಲಾನುಭವಿ ವಿದ್ಯಾರ್ಥಿಗಳಿದ್ದು, ಇವರ ಪಟ್ಟಿಯನ್ನು ಇಲ್ಲಿ ಒದಗಿಸಲಾಗಿದೆ.
ಸೆಂಟರ್ ಾರ್ ಸ್ಮಾರ್ಟ್ ಗೌವರ್ನೆನ್ಸ್ ಅಭಿವೃದ್ಧಿಪಡಿಸಿದ ಯೂನಿೈಡ್ ಯೂನಿವರ್ಸಿಟಿ ಮತ್ತು ಕಾಲೇಜು ಮ್ಯಾನೇಜ್‌ಮೆಂಟ್ ಸಿಸ್ಟಂ ಬಳಸಿಕೊಳ್ಳುತ್ತಿರುವುದರಿಂದ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಗಳನ್ನು ಹೊರಗಿಡಲು ಸಹಾವಾಗುತ್ತಿದೆ.
ಕುಟುಂಬ ತಂತ್ರಾಂಶದಿಂದ ಪಡಿತರ ಚೀಟಿ, ಐಟಿ-ಜಿಎಸ್‌ಟಿ ಪಾವತಿ ಸ್ಥಿತಿ ಮುಂತಾದ ದಾಖಲೆಗಳನ್ನು ಪಡೆದು ಅರ್ಹರನ್ನು ಗುರುತಿಸಲಾಗುತ್ತದೆ. ಡಿಬಿಟಿ ಸೆಲ್ ಅರ್ಜಿದಾರರ ಆಧಾರ್ ಮತ್ತು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆಗೆ ಬೆಂಬಲ ನೀಡುತ್ತಿದೆ.
ಯುವನಿಧಿ ಯೋಜನೆಯಡಿ ಸಹಾಯಧನ ಪಡೆಯಲು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗಳ ಮೂಲಕ ಜಾಲತಾಣ https://sevasindhugs.karnataka.gov.in ದಲ್ಲಿ ನೋಂದಾಯಿಸಬಹುದಾಗಿದೆ.