ನ್ಯೂಸ್

ಯುತಿ 2023; ದಕ್ಷಿಣ ಭಾರತದ ರಂಗ ಸಂಗೀತದ ಸಮ್ಮಿಲನ

ಬೆಂಗಳೂರು: ಪ್ರಸಿದ್ಧ ಹವ್ಯಾಸಿ ರಂಗತಂಡವಾದ ರಂಗಾಸ್ಥೆ ಟ್ರಸ್ಟ್,​​ ಏಳನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಂಡವು ದಕ್ಷಿಣ ಭಾರತದ ರಂಗ ಸಂಗೀತದ ಸಮ್ಮಿಲನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ದಕ್ಷಿಣ ಭಾರತದ ರಂಗ ಸಂಗೀತದ ಸಮ್ಮಿಲನದ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮವು ಏಪ್ರಿಲ್ 22 ಶನಿವಾರದಂದು ಸಂಜೆ 6 ಗಂಟೆಗೆ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ತೆಲುಗು ಭಾಷೆಯನ್ನು ಪ್ರತಿನಿಧಿಸಲು ನಿಭಾ ಥಿಯೇಟರ್ ಸಂಘಟಿತ ವಾದ್ಯ ತಂಡ, ತಮಿಳು ಭಾಷೆಯನ್ನು ಪ್ರತಿನಿಧಿಸಲು ತಿನಾಯ್ ನೀಲ ವಾಸಿಗಳ್ ತಂಡವು, ಮಲಯಾಳಂ ಭಾಷೆಯನ್ನು ಪ್ರತಿನಿಧಿಸಲು ಜನಭೇರಿ ಸ್ಕೂಲ್ ಆರ್ಟ್ಸ್ ಅಂಡ್ ಪರ್ಫಾಮಿಂಗ್ ಸ್ಟಡೀಸ್ ತಂಡವು ಹಾಗೂ ಕನ್ನಡದಿಂದ ರಂಗಾಸ್ಥೆ ತಂಡದ ಸದಸ್ಯರು ವಿಶಿಷ್ಟ ರೀತಿಯ ರಂಗ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ.

ರಂಗಾಸ್ಥೆ ವತಿಯಿಂದ ಪ್ರತಿ ವರ್ಷದಂತೆ ರಂಗಭೂಮಿಯ ಹಿರಿಯ ರಂಗ ಸಂಘಟಕರಿಗೆ ಡಾಕ್ಟರ್ ಹೆಚ್ ನರಸಿಂಹಯ್ಯ ಗೌರವವನ್ನು ನೀಡಲಾಗುತ್ತದೆ. ಈ ಸಾಲಿನ ಗೌರವಕ್ಕೆ ಹಿರಿಯ ಸಂಘಟಕರಾದ ಶ್ರೀ ಗಜಾನನ ಯುವಕ ಮಂಡಲ, ಶೇಷಗಿರಿಯ ಸನ್ಮಾನ್ಯ ಶ್ರೀ ಪ್ರಭು ಸಿದ್ದಪ್ಪ ಗುರಪ್ಪನವರು ಪಾತ್ರರಾಗಿದ್ದಾರೆ.