Indian Food: 'ಪ್ಯಾಸೆಂಜರ್ ಪರಮವೀರ್' ಎಂದು ಕರೆಯಲ್ಪಡುವ ಭಾರತೀಯ ಯೂಟ್ಯೂಬರ್, ಭಾರತೀಯ ಬೀದಿ ಆಹಾರದ ಬಗ್ಗೆ ಚೀನೀ ಮಹಿಳೆಯ ಟೀಕೆಗೆ ಅವರ ತಂಪಾದ ಮತ್ತು ನಗು ಮುಖದಿಂದ ಬಹಳ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದೆ.
ಭಾರತದ ಜನಪ್ರಿಯ ಟ್ರಾವೆಲ್ ವ್ಲಾಗರ್ 'ಪ್ಯಾಸೆಂಜರ್ ಪರಮವೀರ್' ಚೀನಾದ ಯುವತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಮಧ್ಯೆ ಚೀನಾದ ಮಹಿಳೆ ತನ್ನ ಫೋನ್‌ನಲ್ಲಿ ಕೆಲವು ಟಿಕ್‌ಟಾಕ್ ವೀಡಿಯೊಗಳನ್ನು ತೋರಿಸಿದಳು. ಇದಲ್ಲದೆ, ಭಾರತೀಯ ಆಹಾರವು ಕೊಳಕು ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಯುವತಿ ತೋರಿಸಿದ ವೀಡಿಯೋ ತುಣುಕುಗಳಲ್ಲಿ ಮಾರಾಟಗಾರನೊಬ್ಬ ತನ್ನ ಕಂಕುಳನ್ನು ಒರೆಸಿಕೊಂಡು ಮತ್ತೆ ಆ ಕೈಯಿಂದ ಹಿಟ್ಟನ್ನು ಹಿಡಿಯುತ್ತಿರುವುದನ್ನು ತೋರಿಸಿದರೆ, ಇನ್ನೊಬ್ಬ ಅಡುಗೆಯವರು ಅಡುಗೆ ಮಾಡುವಾಗ ಬಾಣಲೆಯಲ್ಲಿ ಕೈ ತೊಳೆಯುತ್ತಿರುವುದನ್ನು ತೋರಿಸಿದರು. ವಿಡಿಯೋ ನೋಡಿ ಚೀನಾ ಮಹಿಳೆ ಭಾರತೀಯ ಆಹಾರದ ಬಗ್ಗೆ ಗೇಲಿ ಮಾಡಿದ್ದಾರೆ.
ವೀಡಿಯೊ ತುಣುಕುಗಳನ್ನು ನೋಡಿದ ನಂತರ, ವ್ಲಾಗರ್ ಪರಮವೀರ್ ನಗಲು ಪ್ರಾರಂಭಿಸಿದರು. ನೀವು ಅಂತಹ ವೀಡಿಯೊಗಳನ್ನು ಎಲ್ಲಿಂದ ನೋಡುತ್ತೀರಿ ಎಂದು ನನಗೆ ತಿಳಿದಿಲ್ಲ. ಆದರೆ ಶುಚಿಯಾದ ಜಾಗಕ್ಕೆ ಹೋದರೆ ಭಾರತೀಯ ಆಹಾರದ ರುಚಿಗೆ ಮಾರುಹೋಗಿ ಚೈನೀಸ್ ಖಾದ್ಯವನ್ನೇ ಮರೆತುಬಿಡುತ್ತೀರಿ ಎಂದು ಯುವತಿಗೆ ಹೇಳಿದ್ದಾನೆ.
ಇದಾದ ನಂತರ ಪರವೀರ್ ಚೈನೀಸ್ ಹುಡುಗಿಯನ್ನು ಉತ್ತಮವಾದ ಭಾರತೀಯ ರೆಸ್ಟೋರೆಂಟ್‌ಗೆ ಕರೆದೊಯ್ದನು. ಅಲ್ಲಿ ಅವಳು ದಾಲ್ ಮಖಾನಿ, ಶಾಹಿ ಪನೀರ್ ಮತ್ತು ನಾನ್ ಸವಿದಿದ್ದಾಳೆ. ಭಾರತೀಯ ಆಹಾರವನ್ನು ಸೇವಿಸಿದ ನಂತರ ಆಕೆಯ ಅನುಮಾನಗಳು ನಿವಾರಣೆಯಾದವು ಎಂದು ಹೇಳಿದ್ದಾಳೆ.. ಭಾರತೀಯ ಆಹಾರ ನಿಜವಾಗಿಯೂ ರುಚಿಕರವಾಗಿದೆ ಎಂದು ಹೇಳಿದ್ದಾಳೆ.
@FedAmsha ಹ್ಯಾಂಡಲ್‌ನೊಂದಿಗೆ ಈ 2 ನಿಮಿಷ 21 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಬಳಕೆದಾರರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.. ಚೀನಾದ ಯುವತಿ ಭಾರತೀಯ ಯೂಟ್ಯೂಬರ್‌ಗೆ ಕೊಳಕು ಭಾರತೀಯ ಬೀದಿ ಆಹಾರದ ವೀಡಿಯೊವನ್ನು ತೋರಿಸಿದ್ದಾರೆ. ಆದ್ದರಿಂದ ಅವರು ಮುಜುಗರಕ್ಕೊಳಗಾಗುವ ಬದಲಾಗಿ, ವ್ಲಾಗರ್ ಅವಳನ್ನು ಒಂದು ಉತ್ತಮವಾದ ಭಾರತೀಯ ರೆಸ್ಟೋರೆಂಟ್‌ಗೆ ಕರೆದೊಯ್ದನು. ಮತ್ತು ಚೀನಾದಲ್ಲಿನ ಅದ್ಭುತ ಭಾರತೀಯ ಪಾಕಪದ್ಧತಿಯನ್ನು ಅವಳಿಗೆ ಸವಿಯುವ ಅವಕಾಶ ಮಾಡಿದನು.
ಕೆಲವು ವೀಡಿಯೊಗಳನ್ನು ಆಧರಿಸಿ ಕೆಲವರು ಭಾರತೀಯ ಪಾಕಪದ್ಧತಿಯನ್ನು ನಿರ್ಣಯಿಸುವುದು ದುರದೃಷ್ಟಕರ ಇಲಿ, ಜಿರಳೆ ತಿನ್ನುವವರಿಗೆ ಭಾರತೀಯ ರುಚಿಯ ರುಚಿ ಗೊತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.