ಹೈದರಾಬಾದ್: ಇತ್ತೀಚಿನ ವರ್ಷಗಳಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಹೋಗಿ ಇಲ್ಲಸಲ್ಲದ ಕೆಲಸಕ್ಕೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಹೆಸರು ಮಾಡಲು ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಈ ಘಟನೆ ಪ್ರಮುಖ ಸಾಕ್ಷಿಯಾಗಿದ್ದು, ವ್ಯಕ್ತಿಯೋರ್ವ ಮಾಡಿದ ಕೆಲಸ ಅನೇಕರ ಜನರ ಜೀವಕ್ಕೆ ಕುತ್ತು ತಂದಿದೆ. ಈ ಘಟನೆಯು ಹೈದರಾಬಾದ್ನ ಕುಕಟ್ಪಲ್ಲಿಯಲ್ಲಿ ನಡೆದಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿರುವ ವ್ಯಕ್ತಿಯೋರ್ವ ಜನನಿಬಿಡ ರಸ್ತೆಯಲ್ಲಿ ಹಣದ ಕಂತೆಯನ್ನು ಗಾಳಿಗೆ ತೂರುತ್ತಾನೆ. ಇದನ್ನು ನೋಡಿದ ಜನ ರಸ್ತೆಯಲ್ಲಿ ಬಿದ್ದಿದ ಹಣವನ್ನು ಪಡೆಯಲು ಮುಗಿ ಬೀಳುತ್ತಾರೆ. ಇದನ್ನು ಆತನ ಜತೆಗಿದ್ದವರು ವಿಡಿಯೋ ಮಾಡಿಕೊಳ್ಳುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಯುವಕನ ನಡೆಗೆ ಕಿಡಿಕಾರಿದ್ದು, ಇದು ದುರಹಂಕಾರದ ಪರಮಾವಧಿ. ರಸ್ತೆಯಲ್ಲಿ ದುಡ್ಡನ್ನು ಆಯುತ್ತಿದ್ದ ಜನರಿಗೆ ಯಾವುದಾದರೆ ವಾಹನ ಡಿಕ್ಕಿ ಹೊಡೆದು ಏನಾದರೂ ಆಗಿದ್ದರೆ ಯಾರು ಹೊಣೆ ಪೊಲೀಸರು ಕೂಡಲೇ ಈತನ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಸಿಬೇಕು ಎಂದು ನೆಟ್ಟಿಗರು ಕಮೆಂಟ್ಗಳ ಮೂಲಕ ಆಗ್ರಹಿಸಿದ್ದಾರೆ.