ನ್ಯೂಸ್

ವಿಡಿಯೋ: 10 ಸಾವಿರ ಲೀಟರ್​ ಕೋಕಾ-ಕೋಲಾ ಬ್ಲಾಸ್ಟ್​ ಆದರೆ ಹೇಗಿರುತ್ತೆ...? 4 ವರ್ಷಗಳ ಶ್ರಮವಿದು...!

ಕೋಕಾ- ಕೋಲಾ ಹಾಗೂ ಬೇಕಿಂಗ್​ ಸೋಡಾ ಭಾರಿ ನೊರೆಯ ರಾಶಿಯನ್ನು ಉಂಟು ಮಾಡುವುದು ಸೈನ್ಸ್​ಪ್ರಿಯರ ಇಷ್ಟದ ಸಂಗತಿ. ಆದರೆ, ಇದನ್ನೇ ಇಲ್ಲೊಬ್ಬ ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾನೆ....!

ರಷ್ಯನ್​ ಯೂಟ್ಯೂಬರ್​ ಮಾಡಿದ ಸಾಹಸವಿದು. ಮ್ಯಾಕ್ಸಿನ್​ ಮೊನಾಕೋವ್​ ಎಂಬಾತ 10 ಸಾವಿರ ಲೀಟರ್​ ಕೋಕಾ-ಕೋಲಾ ಪೇಯದಿಂದ ಉಲ್ಕಾಪಾತವನ್ನೇ ಸೃಷ್ಟಿಸಿದ್ದಾನೆ. ಈ ವಿಡಿಯೋವನ್ನು ಎರಡೇ ದಿನದಲ್ಲಿ 70 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. 1.2 ಲಕ್ಷ ಜನರು ಕಾಮೆಂಟ್​ ಹಾಕಿದ್ದಾರೆ.

ಇದಕ್ಕಾಗಿ ಮಾಕ್ಸಿನ್​ ನಾಲ್ಕು ವರ್ಷಗಳಿಂದ ಶ್ರಮಿಸಿದ್ದ. ಜತೆಗೆ, 7 ಲಕ್ಷ ರೂಬಲ್​ (6.9 ಲಕ್ಷ ರೂ.) ಖರ್ಚು ಮಾಡಿದ್ದಾನೆ. ದೊಡ್ಡಮೈದಾನದ ಮಧ್ಯದಲ್ಲಿ ಬೃಹತ್​ಗೀಸರ್​ನಲ್ಲಿ 10,000 ಲೀಟರ್​ ಕೋಕಾ- ಕೋಲಾ ಸುರಿದು ಅದಕ್ಕೆ ಬೇಕಿಂಗ್​ ಸೋಡಾ ಸೇರಿಸಲಾಗಿದೆ.

ಇದು ಆಕಾಶದೆತ್ತರಕ್ಕೆ ಕಾರಂಜಿಯಂತೆ ಚಿಮ್ಮಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಇಂಥ ಪ್ರಯೋಗ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

YouTuber Creates Giant Explosion With 10,000 Litres Of Coca-Cola

YouTuber, Giant Explosion, 10000 Litres, Coca-Cola,

ಯೂಟ್ಯೂಬರ್​ ಸಾಹಸ, ಕೋಕಾ-ಕೋಲಾ, 10 ಸಾವಿರ ಲೀಟರ್​,