ನ್ಯೂಸ್

ಒಂದೇ ಬಾರಿಗೆ ನನ್ನ ಇಬ್ಬರು ಪತ್ನಿಯರು ಗರ್ಭಿಣಿಯರಾಗಿದ್ದಾರೆ… ಸಂತಸ ಹಂಚಿಕೊಂಡ ಯೂಟ್ಯೂಬರ್; ಕಾಲೆಳೆದ ನೆಟ್ಟಿಗರು!

ಆಂಧ್ರಪ್ರದೇಶ: ಯೂಟ್ಯೂಬರ್ ಅರ್ಮಾನ್ ಮಲಿಕ್ ಎಂಬಾತ ಇನ್ಸ್​​ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾನೆ. ಈ ಫೋಟೋಗಳು ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅರ್ಮಾನ್ ಮಲಿಕ್ ಹಂಚಿಕೊಂಡಿರುವ ಫೋಟೋ ತನ್ನ ಪತ್ನಿಯರದ್ದು.

ಹೌದು, ಯೂಟ್ಯೂಬರ್ ಅರ್ಮಾನ್ ಮಲಿಕ್ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಎಂಬ ಇಬ್ಬರು ಪತ್ನಿಯರನ್ನು ಹೊಂದಿದ್ದ. ಇದೀಗ ಇವರಿಬ್ಬರು ಒಟ್ಟೊಟ್ಟಿಗೆ ಗರ್ಭಿಣಿಯಾಗಿದ್ದಾರೆ ಎಂಬ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ. ಫೋಟೋ ಪೋಸ್ಟ್​ ಮಾಡಿ 'ಇದು ನನ್ನ ಕುಟುಂಬ' ಎಂಬ ಬರೆದುಕೊಂಡಿದ್ದಾನೆ.

ಇದೀಗ ಅರ್ಮಾನ್ ಮಲಿಕ್ ಮಾಡಿರುವ ಪೋಸ್ಟ್​ ಟ್ರೋಲ್ ಮಾಡುವವರಿಗೆ ಅಸ್ತ್ರವಾದಂತಿದೆ. ಯೂಟ್ಯೂಬರ್ ಅರ್ಮಾನ್ ಮಲಿಕ್​ನ ಇಬ್ಬರು ಪತ್ನಿಯರು ಒಟ್ಟೊಟ್ಟಿಗೆ ಗರ್ಭಿಣಿಯರಾಗಿರುವ ವಿಚಾರವನ್ನು ಸಾಕಷ್ಟು ಜನರು ಇದೀಗ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ತಂದೆಯಾಗುತ್ತಿರುವ ಸಂತಸದಲ್ಲಿರುವ ಅರ್ಮಾನ್ ಮಲಿಕ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ವರದಿಯ ಪ್ರಕಾರ, ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಜತೆಗೆ ಮೊದಲು ವಿವಾಹವಾಗಿದ್ದ. ಈಕೆಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ. 2018ರಲ್ಲಿ ತನ್ನ ಪತ್ನಿ ಪಾಯಲ್​ ಸ್ನೇಹಿತೆ ಕೃತಿಕಾ ಎಂಬಾಕೆಯನ್ನು ಅರ್ಮಾನ್ ಮದುವೆಯಾಗಿದ್ದ. (ಏಜೆನ್ಸೀಸ್)