ಪಾಕಿಸ್ತಾನದ ಪ್ರಮುಖ ಸುದ್ದಿ ಮಾಧ್ಯಮ ಡಾನ್ ನ್ಯೂಸ್ನ ಯೂ ಟ್ಯೂಬ್ ಚಾನಲ್ ವೀಕ್ಷಕರಿಗೆ ಭಾನುವಾರ ಮಧ್ಯಾಹ್ನ ಭರ್ಜರಿ ಶಾಕ್ ಎದುರಾಗಿತ್ತು. ಅಷ್ಟೇ ಅಲ್ಲ, ಇದರಿಂದಾಗಿ ಆ ಸುದ್ದಿ ಮನೆಯೇ ಕಂಗಾಲಾಗಿದೆ.
ಮಧ್ಯಾಹ್ನ ಚಾನಲ್ನಲ್ಲಿ ಡೆಟೊಲ್ಗೆ ಸಂಬಂಧಪಟ್ಟ ಜಾಹೀರಾತು ಪ್ರಸಾರವಾಗುತ್ತಿತ್ತು. ಉರ್ದುದಲ್ಲಿ ಕೆಲವು ಬ್ರೇಕಿಂಗ್ ಸುದ್ದಿಯ ಸಾಲುಗಳು ಇದ್ದವು. ಆದರೆ ಸಡನ್ ಆಗಿ ಭಾರತದ ಧ್ವಜ ಅಲ್ಲಿ ಕಾಣಿಸಿತು. ಕೆಲವೇ ಸೆಕೆಂಡ್ನಲ್ಲಿ Happy Independence Day (ಸ್ವಾತಂತ್ರ್ಯೋತ್ಸವದ ಶುಭಾಶಯಗಳು) ಎಂಬ ಸಾಲೂ ಡಾನ್ ಉರ್ದು ಚಾನಲ್ನಲ್ಲಿ ಗೋಚರಿಸಿತು. ಅದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊವಿಡ್-19 ಸೋಂಕಿತ ಮಹಿಳೆ; ಸಿಸೇರಿಯನ್ ಒಂದು ಸವಾಲಾಗಿತ್ತು…!
ಪಾಕ್ನ ಕೆಲವು ವೀಕ್ಷಕರು ಈ ಬಗ್ಗೆ ತಗಾದೆ ತೆಗೆಯುತ್ತಿದ್ದಂತೆ ಡಾನ್ ನ್ಯೂಸ್ ಅದಕ್ಕೊಂದು ಸ್ಪಷ್ಟನೆಯನ್ನೂ ನೀಡಿದೆ. ನಮ್ಮ ನ್ಯೂಸ್ ಚಾನಲ್ನ ಯೂಟ್ಯೂಬ್ನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಇದು ಹೇಗೆ ಆಯಿತೆಂದು ನಮಗೂ ಗೊತ್ತಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಇದೇ ತಿಂಗಳ ಪ್ರಾರಂಭದಲ್ಲಿ ಪಾಕಿಸ್ತಾನ ಸರ್ಕಾರದ ವೆಬ್ಸೈಟ್ವೊಂದು ಹ್ಯಾಕ್ ಆಗಿತ್ತು. ಭಾರತೀಯರೇ ಪಾಕ್ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ ಎಂದು ಅದು ಆರೋಪ ಮಾಡಿತ್ತು. (ಏಜೆನ್ಸೀಸ್)