ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಿಮಿತ್ತ ಪಂಜಿನ ಮೆರವಣಿಗೆ ನಡೆಯಿತು. ವಾಲಿಕಿಲ್ಲಾ ಮ್ಯಾಗೋಟ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮಿ, ಗ್ರಾಪಂ ಸದಸ್ಯ ಎಚ್.ಎಂ.ಮಲ್ಲಿಕಾರ್ಜುನ ಸ್ವಾಮಿ, ವೇದಿಕೆ ಜಿಲ್ಲಾ ಸಂಚಾಲಕ ವೀರೇಶ ಹಂಚಿನಾಳ ಇತರರಿದ್ದರು. 
ನ್ಯೂಸ್

ಅಖಂಡ ಭಾರತದ ಸಂಕಲ್ಪಕ್ಕೆ ಯುವಶಕ್ತಿ ಅಗತ್ಯ

ಗಂಗಾವತಿ: ತಾಲೂಕಿನ ಆನೆಗೊಂದಿಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆ ನಿಮಿತ್ತ ಭಾನುವಾರ ಪಂಜಿನ ಮೆರವಣಿಗೆ ನಡೆಯಿತು.

ನಗರದ ಶ್ರೀ ರಂಗನಾಥ ದೇವಾಲಯದಿಂದ ಮೆರವಣಿಗೆ ಆರಂಭಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪ್ರಾಂತ ಸಂಚಾಲಕ ಅಯ್ಯನಗೌಡ ಹೇರೂರು ಮಾತನಾಡಿ, ಅಖಂಡ ಭಾರತದ ಸಂಕಲ್ಪಕ್ಕೆ ಯುವ ಶಕ್ತಿಯ ಅಗತ್ಯವಿದ್ದು, ದೇಶದ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿಯೋಣ ಎಂದರು.

ವಾಲಿಕಿಲ್ಲಾ ಮ್ಯಾಗೋಟ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದಯ್ಯ ಸ್ವಾಮಿ, ಗ್ರಾಪಂ ಸದಸ್ಯರಾದ ಎಚ್.ಎಂ. ಮಲ್ಲಿಕಾರ್ಜುನ ಸ್ವಾಮಿ, ಎನ್.ಪ್ರವೀಣಕುಮಾರ, ವೆಂಕಟೇಶ, ಕಾಶೀನಾಥ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಕೆ.ಅಮರೇಶ ಪಾಟೀಲ್, ಯುವ ಉದ್ಯಮಿ ಜಿ.ಶರಣ, ವೇದಿಕೆ ಜಿಲ್ಲಾ ಸಂಚಾಲಕ ವೀರೇಶ ಹಂಚಿನಾಳ, ಸಹ ಸಂಚಾಲಕ ಮಂಜುನಾಥ, ಪ್ರಮುಖರಾದ ಎನ್.ಪದ್ಮನಾಭರಾಜ, ಮಂಜುನಾಥ, ಬಾಲು, ನೀಲಯ್ಯ, ರುದ್ರೇಶ, ರಮೇಶ, ರಾಘವೇಂದ್ರ, ಚಿನ್ನ, ರಾಮಚಂದ್ರ ಇತರರಿದ್ದರು.