ಉತ್ತರಪ್ರದೇಶ: ಶ್ರೀಮಂತ ಮಹಿಳೆಯರನ್ನು ಗರ್ಭಿಣಿಯರನ್ನಾಗಿಸಿದ್ರೆ 5 ಲಕ್ಷ ರೂಪಾಯಿ ಸಂಬಳ ಜತೆ ಉದ್ಯೋಗ ನೀಡುವುದಾಗಿ ಜಾಹೀರಾತು ಪ್ರಕಟಿಸಿದೆ. ಈ ಕೆಲಸದ ಆಸೆಯಿಂದ ಆನ್ಲೈನ್ ವಂಚಕರ ಬಲೆಗೆ ಬಿದ್ದು ಯುವಕನೋರ್ವ ಹಣವನ್ನು ಕಳೆದು ಕೊಂಡಿದ್ದಾನೆ. ಈ ಘಟನೆ ಪ್ರಯಾಗ್‌ರಾಜ್ ಪ್ರದೇಶದ ಮೌಯಿಮಾದ ಬಕ್ರಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ನಡೆದಿದ್ದೇನು?: ಕಂಪನಿಯೊಂದು ಪುರುಷರಿಗೆ ಆಫರ್ ನೀಡಿದ್ದು, ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳನ್ನು ಗರ್ಭಿಣಿಯನ್ನಾಗಿಸಿದ್ರೆ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿ ಜಾಹೀರಾತು ನೀಡಿದೆ. ಜಾಹೀರಾತು ನಂಬಿದ ಅಲ್ತಾಫ್, ಅಲ್ಲಿ ನೀಡಲಾಗಿರುವ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದವರು ನೋಂದಣಿ ಶುಲ್ಕವಾಗಿ 800 ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ. ಅಲ್ತಾಫ್ ಒಟ್ಟು 24,000 ರೂಪಾಯಿ ವರ್ಗಾಯಿಸಿದ್ದಾನೆ.
ಅಲ್ತಾಫ್‌ಗೆ ಮತ್ತೆ ಕರೆ ಮಾಡಿ 3 ಲಕ್ಷ ರೂ. ಜಮೆ ಮಾಡುವಂತೆ ಸೂಚಿಸಿದ್ದಾರೆ. ಅಲ್ತಾಫ್ ನಿರಾಕರಿಸಿದಾಗ, ಪೊಲೀಸರ ಪ್ರೊಫೈಲ್ ಫೋಟೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಹಣ ವರ್ಗಾವಣೆ ಮಾಡದಿದ್ದರೆ ಮೊಕದೊಮ್ಮೆ ಹೂಡಿ ಜೈಲಿಗೆ ಕಳುಹಿಸಲಾಗುವುದು ಎಂದು ಬೆದರಿಸಿದ್ದಾರೆ. ಹಣ ಕಳೆದುಕೊಂಡು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ವೀರ್ಯ ದಾನ, ಬಾಡಿಗೆ ತಾಯಿ ಅಂತಹ ವಿಧಾನ ಕಾನೂನು ಪ್ರಕಾರ ನಡೆಯುತ್ತವೆ. ಜನರು ಸುಳ್ಳು ಜಾಹೀರಾತುಗಳ ಬಗ್ಗೆ ಅಲರ್ಟ್ ಆಗಿರಬೇಕು.