ಪ್ಲೋರಿಡಾ: 13ರ ಯುವತಿ ಜತೆ ಲೈಂಗಿಕ ಚಾಟಿಂಗ್ ನಡೆಸಿ ಲೈಂಗಿಕ ಕ್ರಿಯೆಗೆ ಪ್ರೇರೆಪಿಸಲು ಯತ್ನಿಸಿದ್ದಾನೆ ಎಂಬ ಆರೋಪದ ಮೇಲೆ ಅಮೆರಿಕಾದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ.
24 ವರ್ಷದ ಕೀರ್ತನ್ ಪಟೇಲ್ ಎಂಬ ಯುವಕ 13ರ ಬಾಲಕಿ ಜತೆ ಲೈಂಗಿಕ ಚಾಟಿಂಗ್ ಮಾಡಿರುವ ಆರೋಪಿ ಎಂದು ಗುರುತಿಸಲಾಗಿದೆ. ಅಲ್ಲದೇ, ಇತ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪಟೇಲ್ಗೆ ಅಂದಾಜು 10ವರ್ಷದ ವರೆಗೆ ಶಿಕ್ಷೆ ನೀಡಲಾಗುತ್ತದೆ ಅಥವಾ ಜೀವಾವಧಿ ಶಿಕ್ಷೆ ಪ್ರಕಟವಾಗಬಹುದು ಎಂದು ವರದಿಯಾಗಿದೆ. ಆದರೆ, ಕೋರ್ಟ್ ಇನ್ನು ಯಾವುದೇ ತೀರ್ಪು ಕೊಟ್ಟಿಲ್ಲ.
ಇನ್ನು ಯುವತಿ ಅಲ್ಲಿ ಹೋಮ್ಲ್ಯಾಂಡ್ ಸೆಕ್ಯೂರಿಟಿ ಇನ್ವೆಸ್ಟ್ಗೇಷನ್ನ ವಿಶೇಷ ಏಜೆಂಟ್ ಎಂದು ಹೇಳಲಾಗಿದೆ. ಇದೇ ವರ್ಷದ ಮೇ ತಿಂಗಳಿಂದ ಅಕೆ ಜತೆಗೆ ಪಟೇಲ್ ಚಾಟಿಂಗ್ ಮಾಡುತ್ತಿದ್ದ. ರಹಸ್ಯವಾಗಿ ಲೈಂಗಿಕತೆಯ ಬಗ್ಗೆ ಕೇಳಿದ್ದ ಎನ್ನಲಾಗಿದೆ. ಯುವತಿ ವಿಶೇಷ ಏಜೆಂಟ್ ಆಗಿದ್ದ ಕಾರಣದಿಂದ ಘಟನೆ ಕೂಡಲೇ ಹೊರ ಬಂದಿದೆ ಎಂದು ವರದಿ ಉಲ್ಲೇಖಿಸಿವೆ.
US ರಾಜ್ಯದ ಫ್ಲೋರಿಡಾದ ಉತ್ತರದದಲ್ಲಿ ಪ್ರದೇಶದ ಮೇರಿಯನ್ ಕೌಂಟಿಯ ಸ್ಥಳಕ್ಕೆ ಪ್ರಯಾಣಿಸಿದಾಗ ಪಟೇಲ್ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).