ನ್ಯೂಸ್

ಯುವತಿ ಹತ್ಯೆ; ಎನ್‌ಐಎ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಲವ್ ಜಿಹಾದ್ ಬಲೆಗೆ ಬೀಳದ ಹಿಂದು ಯುವತಿಯ ಬರ್ಬರ ಹತ್ಯೆ ಅಮಾನುಷ ಕೃತ್ಯ, ಖಂಡನೀಯವಾಗಿದೆ. ಪ್ರಕರಣದ ಸತ್ಯಾಂಶ ಹೊರ ತರಲು ಕೇಂದ್ರೀಯ ತನಿಖಾ ದಳಕ್ಕೆ ಒಪ್ಪಿಸುವುದೇ ಸೂಕ್ತವೆಂದು ಕೇಂದ್ರ ಸಚಿವೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರು, ಯುವತಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಹುಬ್ಬಳ್ಳಿ ಹಿಂದು ಯುವತಿ ಕೊಲೆ ಪ್ರಕರಣದ ತನಿಖೆ ಜಾಡು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಈ ಅನುಮಾನಕ್ಕೆ ಕಾರಣವೆಂದರು.

ವಿಧಾನಸೌಧದಲ್ಲಿ ದೇಶ ವಿದ್ರೋಹಿ ಘೋಷಣೆ ಕೂಗಲಾಗುತ್ತದೆ. ರಾಮೇಶ್ವರಂ ಕೆಫೆಯಲ್ಲಿ  ಬಾಂಬ್ ಸ್ಫೋಟ, ಉಡುಪಿ ಕಾಲೇಜು ಯುವತಿಯರ ಮೇಲೆ ಆ್ಯಸಿಡ್ ಎರಚಲಾಯಿತು. ಇದೆಲ್ಲ ನೋಡಿದರೆ ಕಾನೂನು ಮತ್ತು ಸುವ್ಯವಸ್ಥೆ ಎಲ್ಲಿದೆ ? ಎಂದು ಪ್ರಶ್ನಿಸಬೇಕಾಗುತ್ತದೆ.

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ ಪ್ರಕರಣ ಬೆಂಗಳೂರಿನಲ್ಲಿ ಇನ್ನೂ ಮಾಸಿಲ್ಲ. ಜೈಶ್ರೀರಾಮ್ ೋಷಣೆಗೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದರೆ, ಮೈಸೂರಿನಲ್ಲಿ ಯುವಕನೊಬ್ಬ ಮೋದಿ ಪರ ಹಾಡು ಬರೆದನೆಂದು ಹಿಂಸಿಸಲಾಗಿದೆ.

ಕೊಡಗಿನಲ್ಲಿ ಪಕ್ಷದ ಕಾರ್ಯಕರ್ತರಿದ್ದ ವಾಹನವನ್ನು ಅಪಘಾತಕ್ಕೀಡು ಮಾಡಿದ್ದು, ಪಕ್ಷದ ಒಬ್ಬ ಕಾರ್ಯಕರ್ತನ ಸಾವಾಗಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆಯು ಸಮಾಜಘಾತುಕರಿಗೆ ಕುಮ್ಮಕ್ಕು ನೀಡಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.

ಎಸ್‌ಡಿಪಿಐ ಆಸರೆ

ಸಿದ್ದರಾಮಯ್ಯ ಮೊದಲ ಆಡಳಿತಾವಧಿಯಲ್ಲಿ ಹಿಂದು ಕಾರ್ಯಕರ್ತರ ಕೊಲೆಯಾದವು. ಜತೆಗೆ ಪಿಎಫ್ ಐ ವಿರುದ್ಧದ ಕೇಸ್‌ಗಳನ್ನು ಹಿಂಪಡೆದು ವಿದ್ರೋಹಿಗಳನ್ನು ರಾಜಾರೋಷವಾಗಿ ಓಡಾಡಲು ಬಿಡಲಾಯಿತು.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪಿಎ್ಐನ ದೇಶ ವಿರೋಧಿ ಕೃತ್ಯಗಳು, ಆರ್ಥಿಕ ವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳನ್ನು ಸಾಕ್ಷಿ, ಆಧಾರಸಹಿತ ಬಯಲಾಯಿತು. ಈ ಹಿನ್ನೆಲೆಯಲ್ಲಿ ಪಿಎ್ಐನ್ನು ಕೇಂದ್ರ ಸರ್ಕಾರ ನಿಷೇಧಿಸಿತು.

ಪಿಎಫ್ ಐ ನಿಷೇಧದ ಬಳಿಕ ಈ ಸಂಘಟನೆಯಲ್ಲಿದ್ದ ಕಾರ್ಯಕರ್ತರೆಲ್ಲ ಅದರದೇ ಮುಖವಾಣಿ ರಾಜಕೀಯ ಪಕ್ಷ ಎಸ್‌ಡಿಪಿಐನಲ್ಲಿ ಆಸರೆ ಪಡೆದಿದ್ದಾರೆ. ಹಿಂದು ಯುವಕರ ಮೇಲೆ ಹಲ್ಲೆ, ಹತ್ಯೆಗೆ ಕಾರಣರಾದವರೆಲ್ಲ ಪಕ್ಷದ ಆಶ್ರಯ ಪಡೆದುಕೊಂಡಿದ್ದಾರೆ. ಅದೇ ಎಸ್‌ಡಿಪಿಐಗೆ ಕಾಂಗ್ರೆಸ್ ಪಕ್ಷವು ಬೆಂಬಲ ನೀಡುತ್ತಿದೆ ಎಂದು ಶೋಭಾ ಕರಂದ್ಲಾಜೆ ದೂಷಿಸಿದರು.