Symbolic Wedding : ಮದುವೆ ನಿಶ್ಚಿತವಾದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಕ್ಕಾಗಿ ಆಕೆಯ ಅಂತ್ಯಕ್ರಿಯೆಗೂ ಮುನ್ನ ಯುವಕನೊಬ್ಬ ಸಾಂಕೇತಿಕ ವಿವಾಹ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಸೋಮವಾರ (ಜೂ.16) ನಡೆದಿದೆ.
ಪ್ರಿಯಾಂಕಾ ಮಾಧೇಸಿಯಾ (23) ಎಂದು ಗುರುತಿಸಲ್ಪಟ್ಟ ಮಹಿಳೆ ರಾತ್ರಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಮಹಿಳೆಯ ಕುಟುಂಬವು ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ.
ಇದನ್ನೂ ಓದಿ: ನಡುಗುವ ಕೈಗಳು, ಕಣ್ಣುಗಳಲ್ಲಿ ನೀರು..ಕೈ ಮುಗಿದು ಪೈಲಟ್ ಮಗನಿಗೆ ಕೊನೆಯ ವಿದಾಯ ಹೇಳಿದ ತಂದೆ! pilot sumit sabharwal funeral
ನಿಚ್ಲೌಲ್‌ನ ಕೃಷ್ಣ ನಗರ ಪ್ರದೇಶದಲ್ಲಿ ಮಹಿಳೆಯ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಮುಂಜಾನೆ ಒಟ್ಟುಗೂಡಿದಾಗ, ಆಕೆಯ ಜೊತೆ ಮದುವೆ ನಿಶ್ಚಯವಾಗಿದ್ದ ಸನ್ನಿ ಕೈಯಲ್ಲಿ ಸಿಂಧೂರ ಹಿಡಿದು ಮುಂದೆ ಹೆಜ್ಜೆ ಇಟ್ಟಿದ್ದಾನೆ.
ನಂತರ ಸ್ಥಳೀಯ ಅರ್ಚಕರೊಬ್ಬರ ನೇತೃತ್ವದಲ್ಲಿ ಮಂತ್ರ ಪಠಣದ ನಡೆಸಿ, ಮೃತ ಮಹಿಳೆಯ ಹಣೆಯ ಮೇಲೆ ಸಿಂಧೂರವನ್ನು ಹಚ್ಚಿಸಿ, ಆಕೆಯ ಶವದ ಸುತ್ತಲೂ ಏಳು ಧಾರ್ಮಿಕ ವೃತ್ತಗಳನ್ನು ನಡೆಯಲು ಸನ್ನಿಗೆ ಹೇಳಿದ್ರು, ಇದನ್ನು ಕಂಡು ಅಲ್ಲಿ ನೆರೆದಿದ್ದ ಜನರು ದಿಗ್ಭ್ರಮೆಗೊಂಡಿದ್ದಾರೆ.
"ಅವಳ ಕೊನೆಯ ಆಸೆಯನ್ನು ಈಡೇರಿಸಲು ನಾನು ಮಾಡಿದ ಮಾರ್ಗ ಇದು, ನಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದೆ" ಎಂದು ಸಾಂಕೇತಿಕ ವಿವಾಹವನ್ನು ನೆರವೇರಿಸಿದ ನಂತರ ಸನ್ನಿ ಹೇಳಿದರು.
"ನವೆಂಬರ್‌ನಲ್ಲಿ ನಾವು ಮದುವೆಯಾಗಲಿದ್ದೇವೆ. ಅವಳು ಇನ್ನಿಲ್ಲದಿದ್ದರೂ, ನಾವಿಬ್ಬರೂ ಕನಸು ಕಂಡಂತೆ ಅವಳನ್ನು ನನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳಲು ನಾನು ಬಯಸಿದ್ದೆ" ಎಂದು ಅವರು ಹೇಳಿದರು.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ; ಬ್ಲೇಡ್, ಚಾಕು ಸೇರಿ ಹಲವು ವಸ್ತುಗಳು ವಶಕ್ಕೆ| parappana-agrahara
ನಂತರ ಸನ್ನಿ ಅಂತ್ಯಕ್ರಿಯೆಯ ಚಿತೆಗೆ ಬೆಂಕಿ ಹಚ್ಚಿದರು, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಸಾಂಕೇತಿಕ ವಿವಾಹವನ್ನು ನಡೆಸಲಾಯಿತು ಎಂದು ನಿಚ್ಲೌಲ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಖಿಲೇಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಆದರೆ ಪ್ರಿಯಾಂಕಾ ಸಾವಿನ ಬಗ್ಗೆ ಕುಟುಂಬವು ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)