ನ್ಯೂಸ್

ಅಶ್ಲೀಲ ಪೋಟೋಗಾಗಿ ಯುವತಿಗೆ ಬ್ಲ್ಯಾಕ್‌ಮೇಲ್

ಬೆಂಗಳೂರು: ತಾಯಿಯ ಪೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಮಗಳಿಗೆ ಕಳುಹಿಸಿ ಕಿಡಿಗೇಡಿಗಳು ಬ್ಲ್ಯಾಕ್‌ಮೇಲ್ ಮಾಡಿದ್ದು, ಅಮೃತಹಳ್ಳಿ ಠಾಣೆಗೆ ಮಗಳು ದೂರು ಸಲ್ಲಿಸಿದ್ದಾಳೆ.

ಅಮೃತಹಳ್ಳಿಯ 18 ವರ್ಷದ ಯುವತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಳು. ಅಲ್ಲಿಂದ ಸಂತ್ರಸ್ತೆ ಮತ್ತು ಆಕೆಯ ತಾಯಿಯ ಪೋಟೋವನ್ನು ಕಿಡಿಗೇಡಿಗಳು ಕದ್ದಿದ್ದರು. ನಂತರ ಯುವತಿಗೆ ‘ನಿನ್ನ ನಗ್ನ ೆಟೋ ಕಳುಹಿಸು. ಇಲ್ಲವಾದರೆ ನಿನ್ನ ತಾಯಿಯ ಅಶ್ಲೀಲ ೆಟೋವನ್ನು ವೈರಲ್ ಮಾಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು.

ನೊಂದ ಯುವತಿ, ತನ್ನ ಅರೆನಗ್ನ ಪೋಟೋವನ್ನು ಕಿಡಿಗೇಡಿಗಳಿಗೆ ಷೇರ್ ಮಾಡಿದ್ದಳು. ಆ ಪೋಟೋವನ್ನು ಳನ್ನು ಇಟ್ಟುಕೊಂಡು ಮತ್ತಷ್ಟು ಪೋಟೋ ಕಳುಹಿಸುವಂತೆ ಒತ್ತಡ ಹಾಕಿದ್ದರು. ಅದಕ್ಕೆ ಒಪ್ಪದೆ ಯುವತಿ ಇದ್ದಾಗ ಅರೆನಗ್ನ ೆಟೋವನ್ನು ಬೇರೆ ಬೇರೆ ಖಾತೆಗಳಿಗೆ ಷೇರ್ ಮಾಡಿದ್ದರು. ಜತೆಗೆ ತಾಯಿಯ ಪೋಟೋವನ್ನು ಸಹ ಆಕೆಯ ಸ್ನೇಹಿತರಿಗೆ, ಸೋದರಮಾವನಿಗೆ ಷೇರ್ ಮಾಡಿದ್ದರು.

6 ತಿಂಗಳುಗಳಿಂದ ಅಪರಿಚಿತ ಕಿಡಿಗೇಡಿಯ ಕಾಟ ಅನುಭವಿಸುತ್ತಿದ್ದ ಯುವತಿ ಕೊನೆಗೆ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಪರಿಚಿತರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.