ಕೋಲಾರ: ಪ್ರೀತಿಸಿದ ಯುವತಿ ಜತೆ ರಿಜಿಸ್ಟ್ರಾರ್ ಮದುವೆ ಆಗಿದ್ದ ಯುವಕನೊಬ್ಬ, ಇಲ್ಲಿನ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ 7-8 ವರ್ಷಗಳಿಂದ ನ್ಯಾಷನಲ್ ಆರೋಗ್ಯ ಮಿಷನ್ ಗುತ್ತಿಗೆ ಆಧಾರದ ಮೇರೆ ಡೇಟಾ ಅಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಬಂಗಾರಪೇಟೆ ತಾಲೂಕಿನ ನಾಯಕರಹಳ್ಳಿಯ ಹರೀಶ್ ಬಾಬು (33) ಬೆನ್ ಕನ್ಸಾಲ್ಟೇಷನ್ ವಿಭಾಗದ ಕೊಠಡಿಯಲ್ಲಿ ನೇಣಿಗೆ ಶರಣಾಣಾಗಿದ್ದಾರೆ.
ನೇಣು ಹಾಕಿಕೊಳ್ಳುವ ಮೊದಲು ಮದ್ಯಪಾನ ಮಾಡಿದ್ದರು. ಪಕ್ಕದಲ್ಲಿ ಮದ್ಯದ ಬಾಟಲಿಗಳು, ಕಬಾಬ್, ಉಪು$್ಪಕಳ್ಳೆ, ಸೋಡಾ, ಪತ್ತೆಯಾಗಿವೆ.
ಎಸ್ಎನ್ಆರ್ ಆಸ್ಪತ್ರೆಯಲ್ಲೆ ಕೆಲಸ ಮಾಡುತ್ತಿದ್ದ ಗಾಂಧಿನಗರ ಯುವತಿಯನ್ನು ಹರೀಶ್ ಬಾಬು4&5 ವರ್ಷಗಳಿಂದ ಪ್ರೀತಿಸುತ್ತಿದ್ದ. ಬೇಗ ಮದುವೆಯಾಗಲು ಯುವತಿ ಮನೆ ಕಡೆಯಿಂದ ಒತ್ತಡ ಇತ್ತು ಎನ್ನಲಾಗಿದೆ.
ಸದ್ಯಕ್ಕೆ ಮದುವೆ ಬೇಡ ಎನ್ನುತ್ತಿದ್ದ ಹರೀಶ್ ಬಾಬುಗೆ ಪ್ರೀತಿಸಿದ ಯುವತಿ ಜತೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಜೆ ರಿಜಿಸ್ಟ್ರ ಮದುವೆ ಮಾಡಿಸಲಾಗಿತ್ತು. ಹರೀಶ್ ಆತ್ಮಹತ್ಯೆ ಸಂಬಂಧ ಅನುಮಾನ ವ್ಯಕ್ತಪಡಿಸಿರುವ ಪೋಷಕರು, ಯುವತಿ ಕುಟುಂಬಸ್ಥರ ವಿರುದ್ಧ ದೂರಿದ್ದಾರೆ.
ರಿಜಿಸ್ಟ್ರ ಮದುವೆ ಬಳಿಕ ಮನೆಗೆ ವಾಪಸ್ ಹೋಗಿದ್ದ ಹರೀಶ್ ಬಾಬು ರಾತ್ರಿ 11 ಗಂಟೆ ಸುಮಾರಿಗೆ ಮದ್ಯದ ಬಾಟಲಿಯೊಂದಿಗೆ ಜಿಲ್ಲಾಸ್ಪತ್ರೆಯ ಕೊಠಡಿಗೆ ಬಂದಿದ್ದಾರೆ. ಮದ್ಯ ಸೇವಿಸಿ ನಂತರ ಅಲ್ಲೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗುರುವಾರ ಬೆಳಿಗ್ಗೆ ಎಂದಿನಂತೆ ಆಸ್ಪತ್ರೆ ಸಿಬ್ಬಂದಿ ಕೆಲಸಕ್ಕೆ ಬಂದಾಗ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಬಂದು ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
* ಯುವತಿ ಕಡೆಯವರ ಮೇಲೆ ಅನುಮಾನ
ಯುವತಿ ಮದುವೆಯಾಗಬೇಕು ಎಂದು ಹಠ ಹಿಡಿದು ಒತ್ತಡ ಹಾಕಿದ್ದಳು. ಆಷಾಢ ಕಾರಣ ಮದುವೆ ಬೇಡವೆಂದರೂ ಕೇಳಲಿಲ್ಲ. ಆದ ಕಾರಣ ಅವರ ಜತೆ ನಾವೆಲ್ಲಾ ತಾಲೂಕು ಕಚೇರಿಗೆ ಹೋಗಿ ರಿಜಿಸ್ಟ್ರರ್ ಮದುವೆ ಮಾಡಿದ್ದೆವು. ಪುತ್ರನ ಸಾವಿನ ಸಂಬಂಧ ಯುವತಿ ಕಡೆಯವರ ಮೇಲೆ ಅನುಮಾನವಿದ್ದು ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಮೃತ ಹರೀಶ್ ಬಾಬು ತಾಯಿ ಸುಶೀಲಮ್ಮ ಹೇಳಿದರು.
* 3 ದಿನಗಳಿಂದ ರಜೆಯಲ್ಲಿದ್ದ
ಇ&ಆಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಹರೀಶ್ ಬಾಬು ಕಾರ್ಯನಿರ್ವಹಿಸುತ್ತಿದ್ದ, ರಾತ್ರಿ ಆಸ್ಪತ್ರೆಯ ಕೊಠಡಿಯಲ್ಲಿ ಬೀಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು ಕಾರಣ ಗೊತ್ತಾಗಲಿದೆ. ಕಳೆದ ತಿಂಗಳು ಪಾಳಿಯಂತೆ ರಾತ್ರಿ ಅವಧಿಯಲ್ಲಿ ಕೆಲಸ ಮಾಡುತ್ತಿದ್ದರು. ಜು.1ರಿಂದ ಹಗಲು ಕೆಲಸ ನಿಗದಿ ಮಾಡಲಾಗಿತ್ತು. ರಜೆ ಹಾಕದೆ ಕಳೆದ ಮೂರು ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ ಎಂದು ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಜಗದೀಶ್ ತಿಳಿಸಿದರು.