ಹೈದರಾಬಾದ್: ಭಾರತದ ಬಿರಿಯಾನಿಗಳಲ್ಲಿ ಹೈದರಬಾದ್ನ ಬಾವರ್ಚಿ ಬಿರಿಯಾನಿ(Biryani) ಫೇಮಸ್. ಆದರೆ, ಇದೇ ಬಿರಿಯಾನಿ ತಿಂದು ಯುವಕನೊಬ್ಬ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ ಪ್ರಕರಣದ ಬೆಳಕಿಗೆ ಬಂದಿದೆ.
ರವಿ ಎನ್ನುವ ಯುವಕ ದಾಖಲಾಗಿದ್ದು, ಇಲ್ಲಿನ ನೇರಡ್ಮೇನ್ನ ಗ್ರೀನ್ ಬಾವರ್ಚಿ ಹೋಟೆಲ್ನಲ್ಲಿ ಗುರುವಾರ ತಡರಾತ್ರಿ ಬಿರಿಯಾನಿ ಸೇವಿಸಿದ್ದಾನೆ. ಮನೆಗೆ ಬಂದ ಬಳಿಕ ವಾಂತಿ, ಬೇಧಿ, ಹೊಟ್ಟೆ ನೋವು ಆರಂಭವಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನು ಹೋಟೆಲ್ನಲ್ಲಿ ಹಳಸಿದ ಬಿರಿಯಾನಿ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ:GKVK Krishi Mela | ಜಿಕೆವಿಕೆಯಲ್ಲಿನ ಕೋಳಿ ಪ್ರಪಂಚದಲ್ಲಿ ರೈತರಿಗೆ ಕೋಳಿ ಸಾಕಾಣಿಕೆ ಕುರಿತಂತೆ ಸಾಕಷ್ಟು ಮಾಹಿತಿ..!
ಯುವಕನ ತೊಂದರೆ ಗಮನಿಸಿದ ಕೆಲವರು, ವೈದ್ಯರು ನೀಡಿರುವ ಪ್ರಿಸ್ಕ್ರಿಷನ್ ಮತ್ತು ಆಸ್ಪತ್ರೆಗೆ ದಾಖಲಾದ ಪೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
''ನ.14ರಂದು ನೇರಡ್ಮೇನ್ನ ಗ್ರೀನ್ ಬಾವರ್ಚಿ ಹೊಟೇಲ್ನಲ್ಲಿ ಬಿರಿಯಾನಿ ಸೇವಿಸಿ ಯುವಕ ಆಸ್ವಸ್ಥಗೊಂಡಿದ್ದಾನೆ. ಹೀಗಾಗಿ, ಹೋಟೆಲ್ ವಿರುದ್ಧ ಕ್ರಮಕೈಗೊಳ್ಳುವುದರ ಜತೆಗೆ ಇಂತಹ ಪ್ರಕರಣಗಳು ದಿನೆದಿನೇ ಹೆಚ್ಚುತ್ತಿದ್ದು, ಹೈದರಾಬಾದ್ ನಗರದ್ಯಾಂತ ಹೋಟೆಲ್ಗಳ ಆಹಾರ ತಪಾಸಣೆ ಆಗತ್ಯ ಇದೆ. ಹೀಗಾಗಿ, ಆಹಾರ ಸುರಕ್ಷತೆ ಆಯುಕ್ತರು ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಸ್ಟ್ನಲ್ಲಿ ಒತ್ತಾಯಿಸಿದ್ದಾರೆ,(ಏಜೆನ್ಸೀಸ್).