ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಬಳಿ ಭಾನುವಾರ ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ.
ಗ್ರಾಮದ ನಿಖಿಲ್ (28) ಮೃತ. ಕೇರಳಾಪುರ ಕಡೆಯಿಂದ ಬೈಕ್‌ನಿಂದ ಬರುತ್ತಿದ್ದಾಗ ಮಾಗಡಿ-ಸೋಮವಾರಪೇಟೆ ಮಾರ್ಗದ ಕಾಳೇನಹಳ್ಳಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನಿಗೆ ತಾಯಿ, ಪತ್ನಿ, ಒಂದು ಮಗು ಇದೆ. ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.