ನವದೆಹಲಿ: ಯಾವುದೇ ಸಂಬಂಧದಲ್ಲಿ ಪ್ರಮುಖವಾದ ವಿಷಯವೇನೆಂದರೆ ಅದು ನಂಬಿಕೆ. ನಂಬಿಕೆ ಅನ್ನೋ ಒಂದು ಅಂಶ ಇಲ್ಲದಿದ್ದರೆ ಪ್ರತಿಯೊಂದು ಸಂಬಂಧವು ಹಾಳಾಗುತ್ತದೆ. ಹೀಗಾಗಿ ಆರೋಗ್ಯಕರ ವೈವಾಹಿಕ ಜೀವನ ಬಹುಮುಖ್ಯವಾದ ಅಂಶವೆಂದರೆ ಅದು ನಂಬಿಕೆ ಮಾತ್ರ.
ಯಾವಾಗ ನಂಬಿಕೆ ಕೆಡುತ್ತದೆ ಅಂದರೆ ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ವಿವಾಹೇತರ ಸಂಬಂಧ ಹೊಂದಿದಾಗ. ಬಹುತೇಕ ಮದುವೆ ಸಂಬಂಧಗಳು ಮುರಿದು ಬೀಳಲು ಈ ಅನೈತಿಕ ಸಂಬಂಧಗಳೇ ಮೂಲ ಕಾರಣ. ಇದೀಗ ಮಹಿಳೆಯೊಬ್ಬಳು ತನಗೆ ನಂಬಿಕೆ ದ್ರೋಹ ಮಾಡಿದ ಗಂಡನನ್ನು ಹಿಡಿದು ಥಳಿಸಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ.
ಪತಿಯ ಕುತ್ತಿಗೆಗೆ ಕೈಹಾಕಿ ಎಳೆದಾಡಿ ಥಳಿಸಿರುವ ದೃಶ್ಯ ವಿಡಿಯೋದಲ್ಲಿದೆ. ಮಹಿಳೆ ಥಳಿಸುವುದನ್ನು ದಾರಿಹೋಕರು ನೋಡಿ ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮದುವೆಯಾದ ನಂತರ ಆತನ ಜೊತೆ ಅನುಭವಿಸಿದ ನೋವನ್ನು ಹೇಳಿಕೊಳ್ಳುತ್ತಾ ಪತಿಗೆ ಗೂಸಾ ನೀಡಿದ್ದಾಳೆ.
ಅರ್ಹಂತ್ ಶೆಲ್ಬಿ ಎಂಬುವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈಗಾಗಲೇ 64 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಭಾರೀ ರಿಟ್ವೀಟ್‌ಗಳೊಂದಿಗೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೈರಲ್ ಆಗಿದೆ. ಈ ಘಟನೆಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದರೂ, ಅನೇಕರು ಮಹಿಳೆಯ ಪರವಾಗಿ ನಿಂತಿದ್ದಾರೆ. ಆದರೆ, ವಿಡಿಯೋ ಎಲ್ಲಿಯದ್ದು? ಯಾವಾಗ ಘಟನೆ ನಡೆಯಿತು? ಎಂಬುದರ ವಿವರಣೆ ಇಲ್ಲ. ಆದರೆ, ಜಾಲತಾಣದಲ್ಲಿ ವೈರಲ್ ಆಗುತ್ತಿದೆ. (ಏಜೆನ್ಸೀಸ್)