ನ್ಯೂಸ್

ನಿರ್ದೇಶಕ-ನಿರ್ಮಾಪಕರ ಜೊತೆ ಮಲಗಿದ್ರೆ ಮಾತ್ರ ಸಿನಿಮಾದಲ್ಲಿ ಚಾನ್ಸ್‌; ಬಿಗ್​​​ ಬಾಸ್​​ ಸ್ಪರ್ಧಿ ಶಾಕಿಂಗ್​ ಹೇಳಿಕೆ…!

ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವಂತಹ ಯಂಗ್​​ ಹುಡುಗಿಯರು ಅನೇಕ ಸವಾಲುಗಳನ್ನ ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಕಾಸ್ಟಿಂಗ್​ ಕೌಚ್​​​ ಸಹ ಒಂದು. ಇದೀಗ ಬಿಗ್​​​ಬಾಸ್​​​​ನಿಂದ ಹೊರಬಂದ ಸ್ಪರ್ಧಿಯೊಬ್ಬರು ಈ ಶಾಕಿಂಗ್​​ ಹೇಳಿಕೆಯನ್ನ ನೀಡಿದ್ದಾರೆ. ಹಿಂದಿ ಬಿಗ್​​​ಬಾಸ್​​​ ಮನೆಯಿಂದ ಹೊರಬಂದ ಕಂಟೆಸ್ಟೆಂಟ್​​ ಐಶ್ವರ್ಯ ಶರ್ಮಾ, ಶಾಕಿಂಗ್​​ ಹೇಳಿಕೆಯೊಂದನ್ನ ನೀಡಿದ್ದಾರೆ.

ಐಶ್ವರ್ಯ ಶರ್ಮಾ ಬಿಗ್​​ಬಾಸ್​​ ಮನೆಯಲ್ಲಿ 8 ವಾರಗಳ ಕಾಲ ಆಟವಾಡಿದ್ದಾರೆ. ನಟಿಯ ಪತಿ ನೀಲ್ ಭಟ್ ಇನ್ನೂ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಐಶ್ವರ್ಯಾ ಶೋನಲ್ಲಿದ್ದಾಗ, ಆಕೆಯ ಮಾಜಿ ಗೆಳೆಯ ಹಲವಾರು ಆರೋಪಗಳನ್ನು ಮಾಡಿದ್ದರು. ಈಗ ನಟಿ ಬಿಗ್ ಬಾಸ್ ಮನೆಯಿಂದ ಹೊರಗಿದ್ದು, ಅವರ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

2014 ರಲ್ಲಿ, ಐಶ್ವರ್ಯ ರಾಹುಲ್ ಪಾಂಡ್ಯ ಎಂಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಇಂಡಸ್ಟ್ರಿಯಲ್ಲಿ ತನ್ನದೇ ಆದ ಐಡೆಂಟಿಟಿಗಾಗಿ ಐಶ್ವರ್ಯಾ ಕಷ್ಟಪಡುತ್ತಿದ್ದ ಸಮಯ ಅದು. ಆಗ ರಾಹುಲ್‌ ಐಶ್ವರ್ಯಗೆ ನಟನೆಯಲ್ಲಿ ಚಾನ್ಸ್​​ ಗಿಟ್ಟಿಸಿಕೊಳ್ಳ ಬೇಕಾದರೆ ನಿರ್ದೇಶಕ-ನಿರ್ಮಾಪಕರ ಜೊತೆ ಮಲಗಿದರೆ ಮಾತ್ರ ಇಂಡಸ್ಟ್ರಿಯಲ್ಲಿ ಕೆಲಸ ಸಿಗುತ್ತದೆ ಎಂದು ಹೇಳುತ್ತಿದ್ದ ಎಂದು ಐಶ್ವರ್ಯಾ ಹೇಳಿಕೊಂಡಿದ್ದಾರೆ.

ನಿರ್ದೇಶಕ-ನಿರ್ಮಾಪಕರ ಜೊತೆ ಮಲಗದ ಹೊರತು ಕೆಲಸ ಸಿಗುವುದಿಲ್ಲ ಎಂಬ ಕಾರಣಕ್ಕೆ ನಟನೆ ಬಿಟ್ಟುಬಿಡಿ ಎಂದು ರಾಹುಲ್‌ ಹೇಳಿದ್ದ. ರಾಹುಲ್​ ಈ ರೀತಿ ಹೇಳಿದ ಸಮಯದಲ್ಲೇ ನಾನು ಅವನ ಜತೆಗೆ ಬ್ರೇಕ್​​ ಅಪ್​ ಮಾಡಿಕೊಂಡೆ ಎಂದು ನಟಿ ಐಶ್ವರ್ಯ ಹೇಳಿಕೊಂಡಿದ್ದಾರೆ.