ನ್ಯೂಸ್

Singham Again | ‘ಬೇಬಿ ಸಿಂಬಾ’ದ ಚೊಚ್ಚಲ ಚಿತ್ರ.. ರಣವೀರ್​ ಸಿಂಗ್ ಮಾತಿನ ಹಿಂದಿನ ಮರ್ಮವೇನು?

​​ಮುಂಬೈ: ಬಾಲಿವುಡ್​ನ ಕ್ಯೂಟ್​ ಕಪಲ್​ ದೀಪ್ವೀರ್ ಇತ್ತೀಚೆಗೆ ಹೆಣ್ಣುಮಗುವಿನ ಪಾಲಕರಾಗಿರುವುದು ಗೊತ್ತೆ ಇದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​​​ ಒಟ್ಟಿಗೆ ಅಭಿನಯಿಸಿರುವ ಬಾಲಿವುಡ್​ನ ಬಹನಿರೀಕ್ಷಿತ ಸಿನಿಮಾ ಸಿಂಗಮ್​​​ ಎಗೇನ್(Singham Again) ಬಿಡುಗಡೆಗೆ ಸಿದ್ಧವಾಗಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಟ್ರೈಲರ್ ಅನ್ನು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸೋಮವಾರ (ಅಕ್ಟೋಬರ್ 7)ರಂದು ಬಿಡುಗಡೆ ಮಾಡಲಾಯಿತು.

ಈವೆಂಟ್​ನಲ್ಲಿ ಮಾತನಾಡಿದ ರಣವೀರ್​ ಸಿಂಗ್​​​​​​​​​​​​​​​​, ದೀಪಿಕಾ ಮಗುವಿನೊಂದಿಗೆ ಬ್ಯುಸಿಯಾಗಿದ್ದಾಳೆ, ಆದ್ದರಿಂದ ಅವಳು ಬರಲು ಸಾಧ್ಯವಾಗಲಿಲ್ಲ, ನನಗೆ ನೈಟ್ ಡ್ಯೂಟಿ ಇದೆ, ಹಾಗಾಗಿ ನಾನು ಬಂದಿದ್ದೇನೆ. ನಮ್ಮ ಚಿತ್ರದಲ್ಲಿ ಸಾಕಷ್ಟು ಸ್ಟಾರ್‌ಗಳು ಇದ್ದಾರೆ. ಆದರೆ ನಾನು ಮತ್ತೊಂದು ವಿಚಾರ ಹೇಳಲು ಬಯಸುತ್ತೇನೆ. ಇದು ನನ್ನ ಮಗಳ ಮೊದಲ ಚಿತ್ರ ಎಂದು ಹೇಳಿದರು.

ಸಿಂಗಮ್ ಎಗೇನ್ ಸಿನಿಮಾದ ಚಿತ್ರೀಕರಣದ ವೇಳೆ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದರು. ಹಾಸ್ಯಮಯವಾಗಿ ಮಾತನಾಡುತ್ತಾ ಈ ಸಿನಿಮಾದ ಮೂಲಕ ತನ್ನ ಮಗು ಕೂಡ ನಟನೆಗೆ ಪದಾರ್ಪಣೆ ಮಾಡಿದೆ ಎಂದು ಹೇಳಿದರು. ಲೇಡಿ ಸಿಂಗಮ್(ದೀಪಿಕಾ), ಸಿಂಬಾ(ರಣವೀರ್​ ಸಿಂಗ್​​) ಮತ್ತು ಬೇಬಿ ಸಿಂಬಾ ಅವರ ಪರವಾಗಿ ನಾವು ನಿಮಗೆಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರುತ್ತೇವೆ. ಟ್ರೈಲರ್ ಅನ್ನು ಆನಂದಿಸಿ ಮತ್ತು ನಿಮ್ಮ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಿ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ಇರಬೇಕು ಎಂದು ಹೇಳಿದರು.

ಈ ಚಿತ್ರದ ಸೆಟ್​ನಲ್ಲಿ ಚಿತ್ರೀಕರಿಸುವಾಗ ಚಿತ್ರದಲ್ಲಿನ ದೀಪಿಕಾ ಅವರ ದೃಶ್ಯಗಳು ಅಭಿಮಾನಿಗಳಿಗೆ ಚರ್ಚೆಯ ವಿಷಯವಾಗಿತ್ತು. ಕಲ್ಕಿ ಸಿನಿಮಾದ ಚಿತ್ರೀಕರಣದ ವೇಳೆ ದೀಪಿಕಾ ಗರ್ಭಿಣಿಯಾಗಿರುವುದು ಈಗಾಗಲೇ ಬಹಿರಂಗವಾಗಿದೆ. ಸಿಂಗಮ್​ ಎಗೇನ್​​ ಚಿತ್ರದ ಶೂಟಿಂಗ್ ಸಮಯದಲ್ಲಿ ದೀಪಿಕಾ ಗರ್ಭಿಣಿಯಾಗಿದ್ದರು ಎಂಬುದು ರಣವೀರ್​ ಸಿಂಗ್​ ಅವರ ಈ ಮಾತಿನಿಂದ ಕ್ಲಾರಿಟಿ ಸಿಕ್ಕಿದೆ.

ಇಷ್ಟು ಸಮಯ ರೊಮ್ಯಾಂಟಿಕ್​​ ಪಾತ್ರದಲ್ಲಿ ಕಂಡಿದ್ದ ದೀಪಿಕಾ ಪಡುಕೋಣೆ ರೋಹಿತ್ ಶೆಟ್ಟಿಯವರ 'ಸಿಂಗಮ್ ಎಗೇನ್' ಚಿತ್ರದಲ್ಲಿ ಆ್ಯಕ್ಷನ್​​​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಆ್ಯಕ್ಷನ್-ಪ್ಯಾಕ್ಡ್ ಚಿತ್ರ ನವೆಂಬರ್​ 1ರಂದು ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ರಣವೀರ್ 'ಸಿಂಬಾ' ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ಅರ್ಜುನ್ ಕಪೂರ್, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ.(ಏಜೆನ್ಸೀಸ್​)