Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಇತರರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ನಿಪುಣರು. ಅವರು ತಮ್ಮ ಜೀವನದಲ್ಲಿ ಎಂದಿಗೂ ಯಾರಿಗೂ ದ್ರೋಹ ಮಾಡುವುದಿಲ್ಲ. ಹಾಗಾದರೆ, ಯಾವ ರಾಶಿಚಕ್ರ ಚಿಹ್ನೆಗಳು ವಿಶ್ವಾಸಾರ್ಹವಾಗಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
12 ರಾಶಿಚಕ್ರ ಚಿಹ್ನೆಗಳಲ್ಲಿ ಮಕರ ರಾಶಿಯವರು ಅತ್ಯಂತ ವಿಶ್ವಾಸಾರ್ಹರು. ನೀವು ಅವರ ಬಳಿ ಏನಾದರೂ ರಹಸ್ಯವಾಗಿಡಲು ಕೇಳಿದರೆ, ಜೀವಕ್ಕೆ ಅಪಾಯ ಎದುರಾದರೂ ಅದನ್ನು ಹೊರಗೆ ಹೇಳುವುದಿಲ್ಲ. ಯಾವುದೇ ಒಂದು ಯೋಜನೆಯಲ್ಲಿ ಪಾಲುದಾರರಾದರೆ ತಮ್ಮ ಮಾತು ಮತ್ತು ಬದ್ಧತೆಯನ್ನು ಉಳಿಸಿಕೊಳ್ಳುತ್ತಾರೆ. ನೀವು ಅವರ ಮಾತನ್ನು ಸುಲಭವಾಗಿ ನಂಬಬಹುದು. ಯಾವುದೇ ಸಂದರ್ಭದಲ್ಲೂ ಯಾರ ನಂಬಿಕೆಗೂ ಈ ರಾಶಿಯವರು ದ್ರೋಹ ಮಾಡುವುದಿಲ್ಲ. ಸರಿಯಾದ ಕೆಲಸವನ್ನು ಮಾಡುವ ಮೂಲಕ ಮಾದರಿಯನ್ನು ತೋರಿಸುವುದರಿಂದ ಅವರನ್ನು ಅತ್ಯಂತ ವಿಶ್ವಾಸಾರ್ಹ ಜನರು ಎಂದು ಕರೆಯಲಾಗುತ್ತದೆ. ಮಾತನ್ನು ಉಳಿಸಿಕೊಳ್ಳುವುದು ಅವರ ಮುಖ್ಯ ನೀತಿಯಾಗಿರುತ್ತದೆ.
ಅತ್ಯಂತ ವಿಶ್ವಾಸಾರ್ಹ ರಾಶಿಚಕ್ರ ಚಿಹ್ನೆಗಳ ಪಟ್ಟಿಯಲ್ಲಿ ಕರ್ಕಾಟಕ ರಾಶಿಯವರು ಎರಡನೇ ಸ್ಥಾನದಲ್ಲಿದ್ದಾರೆ. ಈ ರಾಶಿಯಡಿಯಲ್ಲಿ ಜನಿಸಿದ ಜನರು ಸ್ನೇಹಿತರು ಮತ್ತು ಸಂಬಂಧಿಕರಿಬ್ಬರಿಗೂ ನಿಷ್ಠರಾಗಿರುತ್ತಾರೆ. ಅವರು ತಮ್ಮ ಜೀವನವನ್ನು ಸಾಧ್ಯವಾದಷ್ಟು ನೈತಿಕವಾಗಿ ಮತ್ತು ಪ್ರಾಮಾಣಿಕವಾಗಿ ಬದುಕಲು ಪ್ರಯತ್ನಿಸುತ್ತಾರೆ. ಕೊಟ್ಟ ಭರವಸೆಗಳನ್ನು ಉಳಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗಲು ಹೆಸರುವಾಸಿಯಾಗಿದ್ದಾರೆ. ಯಾವುದೇ ಪರ್ವತವನ್ನು ಏರಲು ನೀವು ಅವರ ಮೇಲೆ ಅವಲಂಬಿತರಾಗಬಹುದು. ಅವರು ಭರವಸೆ ನೀಡಿದರೆ, ಕೊನೆಯವರೆಗೂ ಅದನ್ನು ಉಳಿಸಿಕೊಳ್ಳುತ್ತಾರೆ.
ತುಲಾ ರಾಶಿಯವರು ಗಾಸಿಪ್ ಮಾಡುವವರು, ಜನರನ್ನು ಮೆಚ್ಚಿಸುವವರು, ಗಮನ ಸೆಳೆಯುವವರು ಮತ್ತು ನಿರ್ಣಯ ತೆಗೆದುಕೊಳ್ಳದ ಪ್ರೇಮಿಗಳಂತೆ ಕಾಣಿಸಬಹುದು, ಆದರೆ ಅವರು ತುಂಬಾ ವಿಶ್ವಾಸಾರ್ಹರು. ಅವರು ಪ್ರೀತಿಯ ಗ್ರಹದಿಂದ ಆಳಲ್ಪಡುವುದರಿಂದ, ಪ್ರೀತಿಯನ್ನು ವ್ಯಕ್ತಪಡಿಸುವುದು ಕೇವಲ ಪದಗಳಿಗಿಂತ ಆಧ್ಯಾತ್ಮಿಕ ನಂಬಿಕೆಯನ್ನು ಆಧರಿಸಿರಬೇಕು ಎಂಬ ತತ್ವವನ್ನು ಅವರು ಹೊಂದಿರುತ್ತಾರೆ. ಅವರು ಏನನ್ನಾದರೂ ನಂಬಿದಾಗ, ಅವರು ದೃಢನಿಶ್ಚಯ ಹೊಂದಿರುತ್ತಾರೆ. ಅವರು ಎಂದಿಗೂ ಇತರರ ನಂಬಿಕೆಗೆ ದ್ರೋಹ ಮಾಡುವುದಿಲ್ಲ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.