ನ್ಯೂಸ್

ನೀವು ಇಂದೇ ಮಾಡಿ ಮಾನಿನಕಾಯಿ ಶುಂಠಿ ಪಾನಕ..Mango recipe

Mango recipe: ಮಾವು ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರಲ್ಲೂ ಮಾವಿನ ಸೀಸನ್​ನಲ್ಲಿ ಹಲವಾರು ಬಗೆಬಗೆಯ ಮಾವಿನ ಹಣ್ಣುಗಳನ್ನು ನೋಡಬಹುದು. ಅದೇ ರೀತಿ ಮಾವಿನಿಂದ ತಯಾರಿಸಿದ ಖಾದ್ಯಗಳನ್ನು ಹುಡುಕಿಕೊಂಡು ಜನ ಅಲೆದಾಡುವುದನ್ನು ಗಮನಿಸಿದ್ದೇವೆ. ಈಗ ಮಾವಿನ ಸೀಸನ್​ ಮುಗಿಯುತ್ತಾ ಬಂದಿದ್ದು, ಮಾವು ಪ್ರಿಯರಿಗೆ ಬೇಸರ ತಂದಿದೆ. ನಾವು ಇಂದು ಹೇಳುವ ರೆಸಿಪಿಯನ್ನು ಮಾವಿಹಣ್ಣು ಸೀಸನ್​​ ಮುಗಿಯುವ ಮೊದಲೇ ಮನೆಯಲ್ಲಿ ಮಾಡಿ ಸವಿಯಿರಿ...

ಹಸಿ ಮಾವಿನ ಶುಂಠಿ ಪಾನಕ :

ಬೇಕಾಗುವ ಪದಾರ್ಥಗಳು

100 ಗ್ರಾಂ ಬೆಲ್ಲ

1/2 ಲೀಟರ್​ ನೀರು

2 ಚಮಚ ನಿಂಬೆ ರಸ

1 ಚಮಚ ಏಲಕ್ಕಿ ಪುಡಿ

1 ಚಮಚ ಒಣ ಶುಂಠಿ ಪುಡಿ

½ ಚಮಚ ಕರಿಮೆಣಸಿನ ಪುಡಿ

200 ಗ್ರಾಂ ಹುಣಸೆಹಣ್ಣು

50 ಗ್ರಾಂ ಕತ್ತರಿಸಿದ ಹಸಿ ಮಾವಿನಕಾಯಿ

ಅಲಂಕಾರಕ್ಕಾಗಿ ತುಳಸಿ ಎಲೆಗಳು

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಕರಗಿಸಿಟ್ಟುಕೊಳ್ಳಬೇಕು. ಒಂದು ಬೌಲ್​ನಲ್ಲಿ ಹುಣಸೆ ಹಣ್ಣನ್ನು ನೆನಸಿ, ರಸ ತೆಗೆದುಕೊಳ್ಳಬೇಕು. ನಂತರ ಏಲಕ್ಕಿ ಪುಡಿ, ಶುಂಠಿ ಪುಡಿ, ಕರಿಮೆಣಸಿನ ಪುಡಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಕತ್ತರಿಸಿದ ಮಾವಿನ ಕಾಯಿಯನ್ನು ಬೆರಸಿ ಕೆಲವು ಸಮಯ ಹಾಗೆಯೇ ಬಿಡಬೇಕು. ನಂತರ ಅಷ್ಟನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ತುಳಸಿ ಎಲೆಗಳಿಂದ ಅಲಂಕರಿಸಿದರೆ ಹಸಿ ಮಾವಿನ ಶುಂಠಿ ಪಾನಕ ಸವಿಯಲು ಸಿದ್ಧವಾಗುತ್ತದೆ.

ತಂಪು ತಂಪಾದ ಮಾವಿನಕಾಯಿ ಜ್ಯೂಸ್​​

ಬೇಕಾಗುವ ಪದಾರ್ಥಗಳು 

2 ಕಪ್ ಹಸಿ ಮಾವಿನ ತುಂಡುಗಳು

1½ ಕಪ್ ಸಕ್ಕರೆ

½ ಚಮಚ ಏಲಕ್ಕಿ ಪುಡಿ

1 ಚಮಚ ಜೀರಿಗೆ ಪುಡಿ

¼ ಚಮಚ ಕರಿಮೆಣಸಿನ ಪುಡಿ

ರುಚಿಗೆ ಉಪ್ಪು

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಆನಂತರ ಹಸಿ ಮಾವಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ 3 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಬೇಯಿಸಿ, ಅದಕ್ಕೆ ಸಕ್ಕರೆ ಸೇರಿಸಿ ಇನ್ನೊಂದು 3 ನಿಮಿಷಗಳ ಕಾಲ ಮೈಕ್ರೋವೇವ್‌ನಲ್ಲಿ ಇರಿಸಬೇಕು. ತದನಂತರ ಸಲ್ಲರೆ, ಏಲಕ್ಕಿಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ತಣ್ಣಗಾದ ನಂತರ ರುಬ್ಬಿ ಸವಿಯಬೇಕು.