ನ್ಯೂಸ್

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂ ಹೇಳಿಕೆಗೆ ಸಿಎಂ ಯೋಗಿ ಆದಿತ್ಯನಾಥ್ ಆಕ್ಷೇಪ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು (ಸೋಮವಾರ) ಸದನದಲ್ಲಿ ನೀಡಿದ ಹಿಂದೂ’ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾಂಗ್ರೆಸ್ ನಾಯಕನನ್ನು "ಅಪ್ರಬುದ್ಧ" ಎಂದು ಕರೆದಿದ್ದಾರೆ.

"ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾದ ನಂತರ ಪ್ರಬುದ್ಧರಾಗುತ್ತಾರೆ ಎಂದು ನಾವು ಭಾವಿಸಿದ್ದೇವೆ. ಆದರೆ ಅಪಕ್ವ ಮನಸ್ಸಿನ ವ್ಯಕ್ತಿ ಮಾತ್ರ ಇಂತಹ ಹೇಳಿಕೆಗಳನ್ನು ನೀಡುತ್ತಾನೆ ಎಂದು ಹೇಳಲು ನನಗೆ ವಿಷಾದವಿದೆ. ಹಿಂದೂ ಭಾರತದ ಮೂಲ ಸಮಾಜ ಮತ್ತು ಈ ದೇಶದ ಆತ್ಮ." ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ರಾಹುಲ್ ಗಾಂಧಿ, ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು "ಹಿಂಸಾಚಾರ ಮತ್ತು ದ್ವೇಷ" ದಲ್ಲಿ ಹಗಲಿರುಳು ನಿರತರಾಗಿದ್ದಾರೆ ಎಂದು ಎನ್‌ಡಿಎ ಸಂಸದರನ್ನು ಕೆರಳಿಸಿತ್ತು. ಎಲ್ಲಾ ಧರ್ಮಗಳು ಮತ್ತು ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆ ಮತ್ತು ನಿರ್ಭಯತೆಯ ಬಗ್ಗೆ ಮಾತನಾಡುತ್ತಾರೆ, ಆದರೆ ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತ್ರ ಮಾತನಾಡುತ್ತಾರೆ .ಆಪ್ ಹಿಂದೂ ಹೋ ಹಿ ನಹೀ (ನೀವು ಹಿಂದೂಗಳಲ್ಲ)” ಎಂದು ರಾಹುಲ್ ಹೇಳಿದ್ದರು.

ಇದೇ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸದನದ ನಿಯಮಗಳನ್ನು ಉಲ್ಲಂಘಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬೆನ್ನು ತೋರಿಸುತ್ತಲೇ ಇದ್ದಾರೆ ಎಂದು ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಓಂ ಬಿರ್ಲಾ ಅವರು ಲೋಕಸಭೆಯ ಇತರ ಸದಸ್ಯರನ್ನಲ್ಲ, ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಲು ರಾಹುಲ್ ಗಾಂಧಿಗೆ ಹೇಳಿದ್ದಾರೆ.

ಪ್ರಧಾನಿ ನಾಳೆ ಲೋಕಸಭೆಯಲ್ಲಿ ಮಾತನಾಡುತ್ತಾರೆ. ನಾವು 2004 ರಿಂದ ರಾಹುಲ್ ಗಾಂಧಿಯನ್ನು ನೋಡಿದ್ದೇವೆ. ಆಗ ಅವರು ಸಚಿವರಾಗಿರಲಿಲ್ಲ ಆದರೆ ಸದನದಲ್ಲಿ ಮಾತನಾಡಲು ಅವಕಾಶ ಪಡೆದರು. ಇಂದು ಅವರು ವಿರೋಧ ಪಕ್ಷದ ನಾಯಕರಾಗಿದ್ದಾರೆ ಮತ್ತು ನಾವು ಅವರು ಪ್ರಬುದ್ಧತೆ ತೋರಿಸುತ್ತಾರೆ ಎಂದು ನಾವು ಬಯಸಿದ್ದೆವು.

ಆದರೆ ಅವರು ಇಂದು ಸದನದಲ್ಲಿ ಮಾತನಾಡುವ ರೀತಿಯಿಂದ ನಮಗೆ ನಿರಾಸೆಯಾಗಿದೆ. ಸ್ಪೀಕರ್ ಕಡೆಗೆ ಬೆನ್ನು ತೋರಿಸಬೇಡಿ ಎಂದು ಹೇಳಿದ್ದೇವೆ. ಅವರಿಗೆ ನಿಯಮಗಳ ಬಗ್ಗೆಯೂ ಹೇಳಲಾಯಿತು, ಆದರೆ ಅವರು ಸ್ಪೀಕರ್‌ಗೆ ಬೆನ್ನು ತೋರಿಸುತ್ತಲೇ ತಮ್ಮ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ರಿಜಿಜು ಹೇಳಿದ್ದಾರೆ.