ನ್ಯೂಸ್

ಅಂತಾರಾಷ್ಟ್ರೀಯ ಮಟ್ಟಕ್ಕೆ ರಾಜೇಶ್ವರಿ ಆಯ್ಕೆ

ರಾಣೆಬೆನ್ನೂರ: ಬೆಂಗಳೂರಿನಲ್ಲಿ ಇತ್ತೀಚೆಗೆ ಎಸ್​ಜಿಎಸ್​ ಇಂಟರ್​ನ್ಯಾಶನಲ್​ ಯೋಗಾ ಫೌಂಡೇಶನ್​ ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ಶಿಕ್ಷಕಿ ರಾಜೇಶ್ವರಿ ಉದಗಟ್ಟಿ ದ್ವೀತಿಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಇಂಡೋನೆಷಿಯಾದಲ್ಲಿ ಮೇ 23, 24ರಂದು ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.