????????????????????????????????????????????????????????????????????????????????????????????????????????????????????????????????? 
ನ್ಯೂಸ್

ಯೋಗದಿಂದ ಭಾರತ ವಿಶ್ವಗುರ

ಕೆ.ಆರ್.ನಗರ ೋ ವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಭಾರತ ವಿಶ್ವಗುರುವಾಗಿದೆ ಎಂದು ಪತಂಜಲಿ ಯೋಗಾಶ್ರಮದ ಯೋಗಗುರು ಗೋಪಾಲ್‌ರಾಜ್ ಹೇಳಿದರು.

ಪಟ್ಟಣದ ಕುವೆಂಪುನಗರದಲ್ಲಿ ಭಾನುವಾರ ಆಯೋಜಿಸಿದ್ದ ಸರಳ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗ ಮಹತ್ವವನ್ನು ಅರಿತು ಇಡೀ ವಿಶ್ವವೇ ಜೂ.21ರಂದು ಯೋಗ ದಿನ ಆಚರಿಸುತ್ತಿದೆ. ಭಾತರ ಪ್ರಪಂಚಕ್ಕೆ ಯೋಗ ಕೊಡುಗೆಯನ್ನು ನೀಡಿದೆ ಎಂದರು.
ಯೋಗದಿಂದ ದೇಹ ಮತ್ತು ಮನಸ್ಸು ಒಂದಾಗುತ್ತದೆ. ಜತೆಗೆ ಮಾನಸಿಕ ಒತ್ತಡವನ್ನು ತಡೆದು ಏಕಗ್ರತೆ ಹೆಚ್ಚಿಸುತ್ತದೆ. ಯೋಗ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪ್ರತಿದಿನ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಯೋಗ ಮೋರೆ ಹೋಗುವಂತೆ ಸಲಹೆ ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೆ.ವೈ.ಮಂಜು, ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ, ಯೋಗಪಟುಗಳಾದ ಶಿವಕುಮಾರ್, ರುಕ್ಮಿಣಿ, ಯಶೋಧಾ, ಆನಂದ, ಲೋಕೇಶ್, ನರಸಿಂಹಮೂರ್ತಿ, ಸ್ಪಿನ್‌ಕೃಷ್ಣ, ತ್ಯಾಗರಾಜ್, ಮಧು, ರಾಜಪ್ಪ, ಪುಣ್ಯ ಇನ್ನಿತರರು ಹಾಜರಿದ್ದರು.