ನ್ಯೂಸ್

ನಟಿ ದೀಪಿಕಾ ಪಡುಕೋಣೆ ನನ್ನಂತಹ ಒಬ್ಬ ಸಲಹೆಗಾರನ ನೇಮಿಸಿಕೊಳ್ಳಲಿ; ಯೋಗ ಗುರು ಬಾಬಾ ರಾಮ್​ದೇವ!

malli

ಇಂದೋರ್​: ಯಾವುದೇ ಒಂದು ದೊಡ್ಡ ತೀರ್ಮಾನ ಕೈಗೊಳ್ಳುವಾಗ ನಟಿ ದೀಪಿಕಾ ಪಡುಕೋಣೆ ಸಾಮಾಜಿಕ ಮತ್ತು ರಾಜಕೀಯ ಪರಿಚಯ ಮಾಡಿಕೊಳ್ಳಲಿ ಎಂದು ಯೋಗ ಗುರು ಬಾಬಾ ರಾಮ್​ದೇವ ಸಲಹೆ ನೀಡಿದ್ದಾರೆ.

ಅಲ್ಲದೆ, ಅವರಿಗೆ ದೂರ ದೃಷ್ಟಿ ನೀಡಬಲ್ಲಂತಹ ನನ್ನಂತಹ ಒಬ್ಬ ಸಲಹೆಗಾರನನ್ನು ನೇಮಿಸಿಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದ ಅವರು, ದೀಪಿಕಾ ಒಬ್ಬ ಒಳ್ಳೆಯ, ದಕ್ಷತೆ ಇರುವ ನಟಿ. ಆದರೆ ಅವರು ದೇಶದ ಬಗ್ಗೆ ಇನ್ನೂ ತಿಳಿಯಬೇಕಿದೆ. ಇಂತಹ ಬೌದ್ಧಿಕ ಶಕ್ತಿ ಬಂದ ಮೇಲೆ ಅವರು ಬೇಕಾದರೆ ದೊಡ್ಡ ದೊಡ್ಡ ತೀರ್ಮಾನ ಕೈಗೊಳ್ಳಬಹುದು ಎಂದು ಸಲಹೆ ನೀಡಿದರು.

ಸಿಎಎ ಎಂದರೆ ಏನು ಎಂದು ತಿಳಿಯದವರು ಪ್ರಧಾನಿ ಮೋದಿ ವಿರುದ್ಧ ಅಸಂಬದ್ಧವಾಗಿ ಮಾತನಾಡುತ್ತಾರೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವ ಇಬ್ಬರೂ ಕಾಯ್ದೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕಾಯ್ದೆ ಯಾರ ನಾಗರಿಕತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದರೂ ಕೆಲವರು ಸುಮ್ಮನೆ ಈ ಬಗ್ಗೆ ಅವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.

ಯಾವ ದೇಶವೂ ಡಂಪಿಂಗ್​ ಯಾರ್ಡ್​ ಆಗಲು ಇಷ್ಟ ಪಡುವುದಿಲ್ಲ. ಭಾರತದಲ್ಲಿ ಅಕ್ರಮ ನಾಗರಿಕನ ವಾಸಕ್ಕೆ ಅವಕಾಶವಿಲ್ಲ. ಈಗಾಗಲೇ ದೇಶದಲ್ಲಿ ಅಂತಹ ಎರಡು ಕೋಟಿ ಜನರಿದ್ದಾರೆ ಎಂದರು

ಮೊಮ್ಮಕ್ಕಳು ಅಜ್ಜಿಯಂತೆ ಹೊರಹೊಮ್ಮಿದರೆ, ಅದೊಂದು ಕುಲಕ್ಕೆ ವೈಭವ. ಹೀಗಾದರೆ ಉತ್ತಮ. ನಾನು ಅದನ್ನು ಸ್ವಾಗತಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಬಗ್ಗೆ ಚಾಟಿ ಬೀಸಿದರು. (ಏಜೆನ್ಸೀಸ್​)