ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗೋತ್ಸವ ಕಾರ್ಯಕ್ರಮಕ್ಕೆ ಉಪ್ಪುಂದ ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಚಾಲನೆ  
ನ್ಯೂಸ್

ಯೋಗ ಜೀವನದಿಂದ ಸಾರ್ಥಕ ಬದುಕು : ಮಂಜುನಾಥ ದೇವಾಡಿಗ

ವಿಜಯವಾಣಿ ಸುದ್ದಿಜಾಲ ಬೈಂದೂರು

ಯೋಗ ದಿನಾಚರಣೆ ಕೇವಲ ಆ ದಿನಕ್ಕೆ ಸೀಮಿತವಾಗದೆ, ನಿತ್ಯ ನಿರಂತರವಾದಾಗ ಮಾತ್ರ ಉತ್ತಮ ಆರೋಗ್ಯ ಪಡೆಯಬಹುದು. ಯೋಗ ಜೀವನದಿಂದ ಸಾರ್ಥಕ ಬದುಕು ಕಾಣಬಹುದು ಎಂದು ಉಪ್ಪುಂದ ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಹೇಳಿದರು.

ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್), ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕಾಲ್ತೋಡು, ಜೆಸಿಐ ಉಪ್ಪುಂದ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಚಟುವಟಿಕೆ ಹಾಗೂ ಯೋಗೋತ್ಸವ ಕಾರ್ಯಕ್ರಮಕ್ಕೆ ಹೇರಂಜಾಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಚಾಲನೆ ನೀಡಿ ಮಾತನಾಡಿದರು.

ಕಾಲ್ತೋಡು ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್, 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಹತ್ವ, ಈ ಸಲದ ಘೋಷವಾಕ್ಯ ಮಹಿಳಾ ಸಬಲೀಕರಣಕ್ಕಾಗಿ ಯೋಗ, ಮಹಿಳೆಯರಿಗೆ ಯೋಗದಿಂದಾಗುವ ಆರೋಗ್ಯ ಪ್ರಯೋಜನ ತಿಳಿಸಿದರು. ಹೇರಂಜಾಲು ಮುರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯ ಶಿಕ್ಷಕಿ ಕಮಲಾ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಇದ್ದರು. ಶಿಕ್ಷಕಿಯರಾದ ಶೋಭಾ ನಿರೂಪಿಸಿದರು. ಅನುಪಮಾ ವಂದಿಸಿದರು.