ಬೆಂಗಳೂರು:
ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಆರ್‌ಆರ್‌ಎಂಸಿಎಚ್) ಯೋಗ ದಿನವನ್ನು ಆಚರಿಸಿತು.
ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ್ ನೇತೃತ್ವದಲ್ಲಿ ಪ್ರಾಂಶುಪಾಲರಾದ ಡೀನ್ ಡಾ.ಸತ್ಯಮೂರ್ತಿ ಬಿ., ಡಾ.ಎಸ್.ನವೀನ್, ಉಪಪ್ರಾಂಶುಪಾಲ ಡಾ.ಬಸವರಾಜ ಭಂಡಾರೆ, ವೈದ್ಯಕೀಯ ಅಧೀಕ್ಷಕ ಡಾ.ಪ್ರವೀಣ್ ಕುಮಾರ್, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಉತ್ಸಾಹದಿಂದ ಪಾಲ್ಗೊಂಡರು.
ಯೋಗ ಮತ್ತು ಪ್ರಾಯೋಗಿಕ ಮಹತ್ವ ಕುರಿತು ತಿಳಿವಳಿಕೆ ಅವಧಿಗಳನ್ನು ಒಳಗೊಂಡಿತ್ತು. ವಿವಿಧ ಆಸನಗಳ ಪ್ರಾತ್ಯಕ್ಷಿಕೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾದ ಆರ್ಟ್ ಆ್ ಲಿವಿಂಗ್ ಯೋಗ ತಜ್ಞ ಸಂದೀಪ್ ಶರ್ಮಾ ಅವರು, ದಿನ ನಿತ್ಯ ನಿಯಮಿತ ಯೋಗಾಭ್ಯಾಸದಿಂದ ಆಗುವ ಪ್ರಯೋಜನವನ್ನು ತಿಳಿಸಿಕೊಟ್ಟರು.
2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ದಿನಂದಿ ಯೋಗಕ್ಕೆ ಮಹತ್ವತೆ ಬಂದಿದೆ ಎಂದರು. ಒಂದೂವರೆ ಗಂಟೆಗಳ ತನಕ ಯೋಗಾಭ್ಯಾಸ ನಡೆಯಿತು.