ಶಿಕಾರಿಪುರದಲ್ಲಿ ನಡೆದ ನಟ ಏಸುಪ್ರಕಾಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇಕ್ಬಾಲ್ ಅಹಮದ್, ಕೆ.ಎಸ್.ಹುಚ್ರಾಯಪ್ಪ ಬಿ.ಪಾಪಯ್ಯ, ಎಸ್.ಎನ್.ನರಸಿಂಹಸ್ವಾಮಿ, ಮಧು, ಲೋಕೇಶ್, ಜಿಯಾವುಲ್ಲ, ರಾಜಶೇಖರ್ ಇತರರಿದ್ದರು.  
ನ್ಯೂಸ್

ಯೇಸು ಪ್ರಕಾಶ್‌ಗೆ ಸಂಘಟನೆಗಳಿಂದ ಶ್ರದ್ಧಾಂಜಲಿ

ಶಿಕಾರಿಪುರ: ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಸೋಮವಾರ ಸಿನಿಮಾ ನಟ, ರಂಗಭೂಮಿ ಕಲಾವಿದರ, ಪರಿಸರ ಪ್ರೇಮಿ ಆಗಿದ್ದ ಯೇಸು ಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಗುಡಿ ಸಾಂಸ್ಕೃತಿಕ ಕೇಂದ್ರ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹಮದ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ, ಗುಡಿ ಸಾಂಸ್ಕೃತಿಕ ಕೇಂದ್ರದ ಎಸ್.ಎನ್.ನರಸಿಂಹಸ್ವಾಮಿ, ಮಧು, ಲೋಕೇಶ್, ಜಿಯಾವುಲ್ಲ, ರಾಜಶೇಖರ್, ಹಾಲೇಶ್, ಚಂದ್ರಕಲಾ, ಕಾವ್ಯಾ, ರಂಜಿತಾ, ಚಂದನಾ, ಭಾಗ್ಯಾ ಇತರರಿದ್ದರು. ಕಾರ್ಯಕ್ರಮದಲ್ಲಿ ಯೇಸು ಪ್ರಕಾಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.