ನ್ಯೂಸ್

ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಯಶವಂತಪುರ ರೈಲ್ವೆ ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ಕ್ಲೋಸ್

Webdesk - Ashwini HR

ಬೆಂಗಳೂರು: ಇಂದಿನಿಂದ ಯಶವಂತಪುರ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ಒಂದು ಕ್ಲೋಸ್ ಆಗಲಿದೆ. ತಾತ್ಕಾಲಿಕವಾಗಿ ಫ್ಲಾಟ್‌ ಫಾರ್ಮ್‌ 1ರ ಮೂಲಕ ರೈಲು ನಿಲ್ದಾಣದ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಭಾಗದಲ್ಲಿ ಪುನರಾಭಿವೃದ್ಧಿ ಕಾರ್ಯವನ್ನು ಪ್ರಾರಂಭಿಸುವ ಹಿನ್ನಲೆಯಲ್ಲಿ ಪ್ಲಾಟ್ ಫಾರ್ಮ್ ಒಂದರಲ್ಲಿ ಪ್ರಯಾಣಿಕರಿಗೆ ಓಡಾಡಲು ಪ್ರವೇಶ ನಿರ್ಬಂಧ ಮಾಡಲಾಗಿದೆ.

ಇನ್ನು ಮುಂದೆ ತುಮಕೂರು ರಸ್ತೆಯ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ಇರುವ ಪ್ಲಾಟ್‌ಫಾರ್ಮ್ 6 ಸೈಡ್ ಎಂಟ್ರಿಯಿಂದ ನಿಲ್ದಾಣಕ್ಕೆ ಪ್ರವೇಶವಿರಲಿದೆ. ಜೊತೆಗೆ ನಿಲ್ದಾಣದಲ್ಲಿನ ಕಾಲು ಮೇಲ್ಸೇತುವೆಗಳ ಮೂಲಕ ಇತರ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶಿಸುವಂತೆ ಸೂಚನೆ ನೀಡಲಾಗಿದೆ.

ಈ ಅಡಚಣೆಗೆ ಪ್ರಯಾಣಿಕರ ಬಳಿ ನೈಋತ್ಯ ರೈಲ್ವೆ ಅಧಿಕಾರಿಗಳು ಮನವಿ ಮಾಡಿದ್ದು, ಡಿಜಿಟಲ್ ಮಾಹಿತಿ ಫಲಕಗಳು ಕೂಡ ಕೆಲವು ದಿನಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ. ಎಲ್ಲಾ ರೈಲ್ವೆ ಸಂಬಂಧಿತ ಮಾಹಿತಿಯನ್ನು ಪ್ರಕಟಣೆಗಳ ಮೂಲಕ ಪ್ರಸಾರ ಮಾಡಲಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.