ನ್ಯೂಸ್

'ಯೆಮೆನ್‌ನ ಭವಿಷ್ಯ ಟೆಹ್ರಾನ್‌ನಂತೆಯೇ': ಹೌತಿಗಳಿಗೆ ಎಚ್ಚರಿಕೆ ನೀಡಿದ ಇಸ್ರೇಲ್​ ರಕ್ಷಣಾ ಸಚಿವ ಕಾಟ್ಜ್! Katz

Yeman: "ನಾನು ಸ್ಪಷ್ಟಪಡಿಸಿದಂತೆ ಯೆಮೆನ್‌ನ ಭವಿಷ್ಯವು ಟೆಹ್ರಾನ್‌ನಂತೆಯೇ ಇದೆ. ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸುವುದಕ್ಕಾಗಿ ಹೌತಿಗಳು ಭಾರೀ ಬೆಲೆ ತೆರಬೇಕಾಗುತ್ತದೆ" ಎಂದು ಇಸ್ರೇಲ್​ ರಕ್ಷಣಾ ಸಚಿವ ಕಾಟ್ಜ್ ಎಚ್ಚರಿಸಿದರು.

ಜುಲೈ ಆರಂಭದಲ್ಲಿ, ಹೌತಿಗಳು ಗ್ರೀಕ್ ಹಡಗಿನ ಎಟರ್ನಿಟಿ ಸಿ ಮೇಲೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರು. ಆ ದಾಳಿಯಲ್ಲಿ ಹಡಗಿನಲ್ಲಿದ್ದ 25 ಜನರಲ್ಲಿ 4 ಮಂದಿ ಮೃತಪಟ್ಟಿದ್ದರು. ಇದರ ಪ್ರತಿಯಾಗಿ ಹೌತಿಗಳ ಮೇಲೆ ಸೋಮವಾರ ಇಸ್ರೇಲ್​​ ಸೇನೆ ದಾಳಿ ಮಾಡಿದೆ. ದಾಳಿ ನಂತರ ಇಸ್ರೇಲ್​ ರಕ್ಷಣಾ ಸಚಿವ ಕಾಟ್ಜ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಮೇ ತಿಂಗಳಲ್ಲಿ, ಅಮೆರಿಕವು ಹೌತಿಗಳೊಂದಿಗೆ ಅನಿರೀಕ್ಷಿತ ಒಪ್ಪಂದವನ್ನು ಘೋಷಿಸಿತ್ತು. ಅಲ್ಲಿ ಹಡಗು ದಾಳಿಗಳನ್ನು ಕೊನೆಗೊಳಿಸುವುದಕ್ಕೆ ಪ್ರತಿಯಾಗಿ ವಿರುದ್ಧ ಬಾಂಬ್ ದಾಳಿಯನ್ನು ನಿಲ್ಲಿಸಲು ಒಪ್ಪಿಕೊಂಡಿತ್ತು. ಆದರೆ, ಈ ಒಪ್ಪಂದವು ಇಸ್ರೇಲ್ ಅನ್ನು ಉಳಿಸುವುದನ್ನು ಒಳಗೊಂಡಿಲ್ಲ ಎಂದು ಹೌತಿಗಳು ಹೇಳಿದ್ದರು.( *ಏಜೆನ್ಸೀಸ್* ​)