rain 
ನ್ಯೂಸ್

ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್- Yellow alert for 9 districts

ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಈ ವೇಳೆ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿ.ಸೆ. ಅಸುಪಾಸಿನಲ್ಲಿ ದಾಖಲಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು: ಅರ್ನಾಬ್ ಸೈಕ್ಲೋನ್ ಪರಿಣಾಮದಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಗುರುವಾರ ತುಸು ಬಿರುಸಾಗಿ ಮಳೆಯಾದರೆ, ಉಳಿದೆಡೆ ಸಾಧಾರಣವಾಗಿತ್ತು.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕಲಬುರಗಿ, ರಾಯಚೂರು, ವಿಜಯಪುರ ಮತ್ತುಯಾದಗಿರಿಯಲ್ಲಿ ಸೆ.25ರಂದು ಜೋರು ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ.

ಹಾಸನ, ಕೊಡಗು, ಬೆಳಗಾವಿ, ಧಾರವಾಡ, ಗದಗ, ಹಾವೇರಿಯಲ್ಲಿ ಮುಂದಿನ 4 ದಿನ ಸಾಧಾರಣ ಮಳೆ ಸುರಿದರೆ,ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.

ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದ್ದು, ಈ ವೇಳೆ 40 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿ.ಸೆ. ಅಸುಪಾಸಿನಲ್ಲಿ ದಾಖಲಾಗಬಹುದು ಎಂದು ಇಲಾಖೆ ಮಾಹಿತಿ ನೀಡಿದೆ.

ಸೆ.30ಕ್ಕೆ ಮುಂಗಾರು ಕೊನೇ

ಪ್ರಸಕ್ತ ಸಾಲಿನ ಮುಂಗಾರು ಸೆ.30ಕ್ಕೆ ಸಮಾಪ್ತಿಗೊಳ್ಳಲಿದೆ. ಅ.1ರಿಂದ ಈಶಾನ್ಯ ಮಾನ್ಸೂನ್ ಶುರುವಾಗಲಿದೆ. ಸೂಪರ್ ಎಲ್‌ನಿನೋ ಪರಿಣಾಮದಿಂದ ರಾಜ್ಯಾದ್ಯಂತ ಈಗಾಗಲೇ ಮಳೆ ಕುಂಠಿತವಾಗಿದ್ದು, ಜೂ.1ರಿಂದ ಸೆ.24ರವರೆಗೆ ಶೇ.35 ಮಳೆ ಅಭಾವವಾಗಿ 186 ತಾಲೂಕುಗಳಲ್ಲಿ ಬರ ಇದೆ.