2021ನೇ ವರ್ಷ ಇನ್ನೊಂದು ದಿನಕ್ಕೆ ಕಾಲನಲ್ಲಿ ಲೀನವಾಗುತ್ತಿದೆ. ಹೊಸ ವರ್ಷದ ಹೊಸ್ತಿಲಲ್ಲಿ ನಿಲ್ಲುವ ಮುನ್ನ ಒಮ್ಮೆ ಹಿಂತಿರುಗಿ ನೋಡಿದರೆ ಸಾಲು ಸಾಲು ಸಾವಿನ ನೋವಿನ ಚಿತ್ರಣಗಳು ಎದುರಾಗುತ್ತವೆ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಅವರೆಲ್ಲ ನೆನಪುಗಳನ್ನು ಉಳಿಸಿ ಹೋಗಿದ್ದಾರೆ. ಅಂಥ ಕೆಲವರ ನೆನಪು ಇಲ್ಲಿದೆ.
ರಾಜಕೀಯ
- ರಾಜ್ಯಸಭಾ ಸದಸ್ಯ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್-ಸೆ. 13; 1980ರಲ್ಲಿ ಭಾರತದ ಏಳನೇ ಲೋಕಸಭೆಗೆ ಪ್ರತಿನಿಧಿಯಾಗಿ ಉಡುಪಿಯಿಂದ ಚುನಾಯಿತರಾದರು. ಕೇಂದ್ರ ಸಂಪುಟದಲ್ಲಿ ಹಲವಾರು ಖಾತೆಗಳ ಸಚಿವರಾಗಿ ವಿವಿಧ ಅವಧಿಗಳಲ್ಲಿ ಕಾರ್ಯನಿರ್ವಹಿಸಿದ್ದರು.
- ಮಾಜಿ ಸಚಿವ ಆರ್.ಎಲ್. ಜಾಲಪ್ಪ - ಡಿ.17
- ಕೆ. ರೋಸಯ್ಯ-ಡಿ. 4
- ಎಸ್. ಆರ್. ಮೋರೆ-ಡಿ. 9
- ವಿರೂಪಾಕ್ಷಪ್ಪ ಅಗಡಿ-ಅ. 13
- ಕೆ. ರಾಮಭಟ್-ಡಿ. 6
- ಡಾ. ಎಂ.ಪಿ. ಕರ್ಕಿ-ಅ. 18
- 15ನೇ ವಿಧಾನಸಭೆಯ ಹಾಲಿ ಸದಸ್ಯರಾಗಿದ್ದ ಸಿ.ಎಂ.ಉದಾಸಿ- ಜೂ. 8
- ಮಾಜಿ ಸಭಾಧ್ಯಕ್ಷರಾಗಿದ್ದ ಕೃಷ್ಣ-ಮೇ 21
- ಕೇಂದ್ರದ ಮಾಜಿ ಸಚಿವ, ರೈತ ಮುಖಂಡ ಬಾಬಾಗೌಡ ಪಾಟೀಲ- ಮೇ 21
- ಮಾಜಿ ಸಂಸದ ಹಾಗೂ ರಾಜ್ಯದ ಮಾಜಿ ಸಚಿವ ಜಿ. ಮಾದೇಗೌಡ- ಜು.17
- ಹಾವೇರಿ ಹೋರಾಟದಲ್ಲಿ ಯಾವಾಗಲೂ ಮುಂಚೂಣಿ ನಾಯಕರಾಗಿದ್ದ ಮಾದೇಗೌಡ ಅವರದ್ದು ಹೋರಾಟದ ಬದುಕು. ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
- ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ರಾಜ್ಯದ ಮಾಜಿ ಸಚಿವ ಕೆ.ಬಿ. ಶಾಣಪ್ಪ-ಮೇ 9
- ಮಾಜಿ ಸಂಸದ ಎಸ್.ಬಿ. ಸಿದ್ನಾಳ್- ಎ. 27
- ಡಾ. ಮುಮ್ತಾಜ್ ಅಲಿ ಖಾನ್-ಜೂ. 7
- ಎಂ. ಸಿ. ಮನಗೂಳಿ-ಜ. 28
- ನ್ಯಾ. ರಾಮಾ ಜೋಯಿಸ್-ಫೆ. 16 ಪಂಜಾಬ್ ಮತ್ತು ಹರ್ಯಾಣದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು. 1975ರ ತುರ್ತಪರಿಸ್ಥಿತಿ ಸಂದರ್ಭದಲ್ಲಿ ಬಂಧಿತರಾಗಿ ಜೈಲುವಾಸ ಅನುಭವಿಸಿದ್ದರು. ರಾಜ್ಯಸಭೆ ಸದಸ್ಯರಾಗಿದ್ದರು. ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳ ರಾಜ್ಯಪಾಲರಾಗಿದ್ದರು.
ರಾಷ್ಟ್ರೀಯ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಕಲ್ಯಾಣ್ ಸಿಂಗ್- ಆ. 21; ಬೂಟಾ ಸಿಂಗ್-ಜ. 2; ಅಜಿತ್ ಸಿಂಗ್- ಮೇ 6; ವೀರಭದ್ರ ಸಿಂಗ್-ಜು. 8
ಸೇನೆ
ಜನರಲ್ ಬಿಪಿನ್ ರಾವತ್-ಡಿ.8: ಮೂರೂ ಸೇನಾ ಪಡೆಗಳ ಮೊದಲ ಮುಖ್ಯಸ್ಥ(ಚೀಫ್ ಆಫ್ ಡಿಫೆನ್ಸ್ ಸ್ಟಾಫ್-ಸಿಡಿಎಸ್) ಜನರಲ್ ಬಿಪಿನ್ ರಾವತ್ ಸೇರಿ 14 ಜನರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿ ದುರಂತಕ್ಕೀಡಾಯಿತು. ಸೂಳೂರಿನ ವಾಯುನೆಲೆಯಿಂದ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಕಾಲೇಜಿಗೆ ತೆರಳುತ್ತಿದ್ದಾಗ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಅವಘಡ ಸಂಭವಿಸಿತು. ರಾವತ್ ಜತೆಗೆ ಪತ್ನಿ ಮಧುಲಿಕಾ, ಬ್ರಿಗೇಡಿಯರ್ ಎಸ್.ಎಸ್. ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಮತ್ತು ಇತರರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಜೀವಂತವಾಗಿ ಉಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಡಿ. 15ರಂದು ನಿಧನರಾದರು.
ವೈದ್ಯಕೀಯ, ಮಾಧ್ಯಮ
- ಆಯುರ್ವೆದ ತಜ್ಞ ಹಾಗೂ ಕೊಟಕ್ಕಲ್ ಆರ್ಯವೈದ್ಯಶಾಲಾದ ಪಿ.ಕೆ. ವರಿಯರ್-ಜು. 10
- ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಫೋಟೊಜರ್ನಲಿಸ್ಟ್ ಡ್ಯಾನಿಷ್ ಸಿದ್ದಿಕಿ-ಜು. 16
- ಹಿರಿಯ ಪತ್ರಕರ್ತ ಚಂದನ್ ಮಿತ್ರ- ಸೆ. 2
- ಹಿರಿಯ ಪತ್ರಕರ್ತ ವಿನೋದ್ ದುವಾ- ಡಿ. 4
- ಹಿರಿಯ ಪತ್ರಕರ್ತ ರೋಹಿತ್ ಸರ್ಡಾನಾ- ಏ.30
- ತಿತಿಹಾಸಕಾರ ಬಾಬಾಸಾಹೇಬ್ ಪುರಂದರೆ - ನ.15
ಪರಿಸರ: ಸುಂದರ್ಲಾಲ್ ಬಹುಗುಣ- ಮೇ 21 ಹಿಮಾಲಯದಲ್ಲಿ ಕಾಡು ಸಂರಕ್ಷಣೆಗೆ ನಿರಂತರ ಹೋರಾಡಿ ಆ ಮೂಲಕ ದೇಶಾದ್ಯಂತ ಪರಿಸರ ಕಾಳಜಿ ಮೂಡಿಸಿದ ಚಿಪ್ಕೋ ಚಳವಳಿಯ ನೇತಾರ. ದೇಶದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದ ಅವರು ಕರ್ನಾಟಕದ ಅಪ್ಪಿಕೋ ಆಂದೋಲನಕ್ಕೂ ಪ್ರೇರಕ ಶಕ್ತಿಯಾಗಿದ್ದರು.
ಸಂಗೀತ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪದ್ಮವಿಭೂಷಣ ಗುಲಾಮ್ ಮುಸ್ತಫಾ ಖಾನ್- ಜ. 17
ಕ್ರೀಡೆ: ಕ್ರೀಡಾಪಟು ಮಿಲ್ಖಾ ಸಿಂಗ್- ಜೂ. 18; ಕ್ರಿಕೆ್ಝ್ರೆಟಿಗ ಯಶಪಾಲ್ ಶರ್ಮ- ಜು. 13
ಸಿನಿಮಾ
- ಪುನೀತ್ ರಾಜಕುಮಾರ್-ಅ.29
- ಎಸ್. ಶಿವರಾಂ-ಡಿ. 04
- ಅಭಿನಯ ಶಾರದೆ ಜಯಂತಿ- ಜು. 26
- ಸಂಚಾರಿ ವಿಜಯ್-ಜೂ.15
- ಶಂಖನಾದ ಅರವಿಂದ್-ಮೇ 07
- ನಟ ಪ್ರೊ. ಜಿ.ಕೆ. ಗೋವಿಂದರಾವ್ - ಅ. 15
- ನಟ ಸತ್ಯಜಿತ್ - ಅ.09
- ಬಾಲಿವುಡ್ ನಟ ದಿಲೀಪ್ ಕುಮಾರ್-ಜು. 7
- ಸಿನಿಮಾ ನಿರ್ಮಾಪಕ- ಕೆ. ಬಾಲು- ಜ.2
- ಬಾಲಿವುಡ್ ನಟ ರಾಜೀವ್ ಕಪೂರ್- ಜ.9
- ತಮಿಳು ಹಾಸ್ಯನಟ ವಿವೇಕ್- ಜ.17
ಸಂಸ್ಕೃತಿ, ಸಂಗೀತ, ಸಾಹಿತ್ಯ, ಯಕ್ಷಗಾನ
- ಪ್ರೊ. ಕೆ.ಎಸ್. ನಾರಾಯಣಾಚಾರ್ಯ-ನ. 26: ಅನೇಕ ಭಾಷೆಗಳಲ್ಲಿ ಪ್ರಾವೀಣ್ಯ ಪಡೆದಿದ್ದ, ಅಸಂಖ್ಯಾತ ವಿಚಾರಗಳಲ್ಲಿ ಪ್ರೌಢಿಮೆ ಗಳಿಸಿದ್ದ ಬಹುಶ್ರುತ ವಿದ್ವಾಂಸ, ವಾಗ್ಮಿ, ಲೇಖಕ, ಅಂಕಣಕಾರ, ಪ್ರಾಧ್ಯಾಪಕ. ವೇದ, ಉಪನಿಷತ್ತು, ಸಂಸ್ಕೃತಿ, ಇತಿಹಾಸ, ಸಂಶೋಧನೆಗಳೆಲ್ಲದರ ಒಗಟನ್ನು ಬಿಡಿಸಿ, ತಿಳಿಹೇಳುವ ವಿದ್ವತ್ತು, ಜ್ಞಾನಸಂಪತ್ತು ಅವರದ್ದು. ನೂರೈವತ್ತು ಗ್ರಂಥಗಳನ್ನು ರಚಿಸಿದ್ದಾರೆ.
- ಡಾ.ಸಿದ್ದಲಿಂಗಯ್ಯ- ಜೂ.11: ಸಾಹಿತಿ ಸಿದ್ದಲಿಂಗಯ್ಯ ಬಂಡಾಯ ಚಳವಳಿಗೆ ಮೊನಚು ಕಾವ್ಯದ ಕಾವು ನೀಡಿದವರು. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
- ಸ್ವಾಮಿ ಹರ್ಷಾನಂದ ಮಹಾರಾಜ್-ಜ. 12: ವಿವರಣಾತ್ಮಕ ಹಿಂದೂ ವಿಶ್ವಕೋಶದಂಥ ಮಹತ್ವದ ಕೃತಿಗಳನ್ನು ನೀಡಿದವರು. ರಾಮಕೃಷ್ಣಾಶ್ರಮದ ಹಿರಿಯ ಸನ್ಯಾಸಿಯಾಗಿ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡವರು.
- ಪ್ರೊ. ಜಿ. ವೆಂಕಟಸುಬ್ಬಯ್ಯ-ಎ. 19: ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡು ಭಾಷಾಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದವರು ‘ಇಗೋ ಕನ್ನಡ’ ಖ್ಯಾತಿಯ ಪ್ರೊ. ಜಿವಿ. 40 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಶತಾಯುಷಿ.
- ಬಾಬೂರಾವ್ ದೇಸಾಯಿ- ಜ.23: ಆರೆಸ್ಸೆಸ್ ಹಾಗೂ ವಿಶ್ವ ಹಿಂದು ಪರಿಷತ್ನ ಹಿರಿಯ ನಾಯಕರಾಗಿದ್ದವರು ರಘುನಾಥ ನಾರಾಯಣರಾವ್ ಪ್ರಭು ದೇಸಾಯಿ(ಬಾಬೂರಾವ್ ದೇಸಾಯಿ). ಆರೆಸ್ಸೆಸ್ನ ಎರಡನೇ ಸರಸಂಘಚಾಲಕ ಗುರೂಜಿ ಗೋಳ್ವಲ್ಕರ್ ಅವರಿಂದ ಆರಂಭವಾಗಿ ನಾಲ್ವರು ಸರಸಂಘಚಾಲಕರವರೆಗೂ ಪ್ರಚಾರಕರಾಗಿ ದುಡಿದವರು.
- ಸಪ್ನಾ ಬುಕ್ ಹೌಸ್’ನ ಸುರೇಶ್ ಶಾ- ಮೇ 25: ಪುಸ್ತಕೋದ್ಯಮ, ಅದರಲ್ಲೂ ಪ್ರಾದೇಶಿಕ ಭಾಷೆಗಳ ಪುಸ್ತಕೋದ್ಯಮ ಎಂದಕೂಡಲೆ ನಷ್ಟದ ಉದ್ಯಮ ಎಂದು ಮೂಗು ಮುರಿಯುವವರೇ ಹೆಚ್ಚಾಗಿದ್ದ ಸಮಯದಲ್ಲಿ ಭಾರತದ ಅತಿದೊಡ್ಡ ಪುಸ್ತಕ ಮಳಿಗೆ ಸಪ್ನಾ ಬುಕ್ ಹೌಸ್ ಸಂಸ್ಥಾಪಿಸಿದವರು.
- ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ-ಮಾ. 6: ಭಾವಗೀತೆ, ಗೀತಕಾವ್ಯಗಳಿಂದ ಜನಪ್ರಿಯರಾಗಿದ್ದ, ನಾಡಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಕನ್ನಡ ಮತ್ತು ಸಂಸ್ಕೃತಗಳಲ್ಲಿ ಪರಿಶ್ರಮವಿದ್ದ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅಮೂಲ್ಯ ಕೃತಿಗಳನ್ನು ನೀಡಿದ್ದಾರೆ.
- ವಿದ್ವಾನ್ ರಾಮಚಂದ್ರ ಶರ್ಮ ತ್ಯಾಗಲಿ- ನ.10: ಸಂಸ್ಕೃತ ವಿದ್ವಾಂಸ, ಜ್ಯೋತಿಷಿ, ಕೃಷಿಕ, ಶಿಕ್ಷಕರಾಗಿದ್ದವರು. ಸಾವಿರಾರು ಜನರಿಗೆ ಸಂಸ್ಕೃತ, ಜ್ಯೋತಿಷ ಶಾಸ್ತ್ರಗಳಲ್ಲಿ ಮಾರ್ಗದರ್ಶಕ, ಗುರುಗಳಾಗಿದ್ದರು. ಕನ್ನಡ, ಹಿಂದಿ, ಸಂಸ್ಕೃತದಲ್ಲಿ ಪ್ರಕಾಂಡ ಪಾಂಡಿತ್ಯ ಹೊಂದಿದ್ದವರು.
- ಪ್ರೊ. ಎಂ.ಎ. ಹೆಗಡೆ- ಎ. 18: ಮಧುಸೂಧನ ಸರಸ್ವತಿ, ಬಿ.ಕೆ. ಮತಿಲಾಲ್ ಮೊದಲಾದವರ ವಿಚಾರಗಳನ್ನು ಕನ್ನಡಕ್ಕೆ ತಂದ ಸಂಸ್ಕೃತ, ಕನ್ನಡ ವಿದ್ವಾಂಸ. ‘ಅಲಂಕಾರ ಶಾಸ್ತ್ರ’ದಂಥ ಅಪರೂಪದ ಕೃತಿ ನೀಡಿದವರು. ಯಕ್ಷಗಾನ ತಜ್ಞ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು.
- ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ -ಆ.9
- ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್- ಅ.12
- ಶಿಕ್ಷಣ ತಜ್ಞರಾಗಿದ್ದ ಪೊ›. ಎಂ.ಐ. ಸವದತ್ತಿ- ಜೂ. 9
- ಸಾಹಿತಿ ಡಾ. ವಸಂತ ಕುಷ್ಟಗಿ- ಜೂ. 4
- ಜರಗನಹಳ್ಳಿ ಶಿವಶಂಕರ್-ಮೇ 5
- ಶಿಲ್ಪಕಲಾವಿದೆ ಕನಕಾಮೂರ್ತಿ-ಮೇ 13: ಪ್ರಸಿದ್ಧ ಶಿಲ್ಪಿ ವಾದಿರಾಜರ ಹಿರಿಯ ಶಿಷ್ಯೆಯಾಗಿ ಅವರ ಎಲ್ಲ ತಂತ್ರಗಾರಿಕೆಗಳನ್ನು ಕರಗತ ಮಾಡಿಕೊಂಡಿದ್ದ ಶಿಲ್ಪ ಕಲಾವಿದೆ. ಕರ್ನಾಟಕ ಸಂಗೀತ, ಚಿತ್ರಕಲೆಯಲ್ಲಿಯೂ ಸಿದ್ಧಹಸ್ತರಾಗಿದ್ದ ಬಹುಮುಖ ಪ್ರತಿಭೆ.
- ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್-ಜು.19
- ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರೆ ಕೂಡ್ಲಿ ಶೖಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಭಿನವ ಶಂಕರಭಾರತಿ ಸ್ವಾಮೀಜಿ- ಮೇ 17
- ಲಕ್ಷ್ಮಣದಾಸ್ ವೇಲಣಕರ್ -ಡಿ.22 ಹರಿಕಥಾ ವಿದ್ವಾನ್, ಆಧ್ಯಾತ್ಮಿಕ ಚಿಂತಕ, ಪ್ರವಚನಕಾರರಾಗಿದ್ದರು. ಅಧ್ಯಾತ್ಮಕ್ಕೆ ಸಂಬಂಧಿಸಿದ ನೂರಕ್ಕೂ ಅಧಿಕ ಕೃತಿಗಳನ್ನು ಕನ್ನಡಕ್ಕೆ ತಂದವರು.
- ಜಾನಪದ ವಿದ್ವಾಂಸ ಕ. ರಾ. ಕೃಷ್ಣಸ್ವಾಮಿ(ಕರಾಕೃ)- ಮೇ 22
- ಕಲಾವಿದ ಜೆಎಂಎಸ್ ಮಣಿ- ಜೂ.3
ಇತರ
- ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್.ದೊರೆಸ್ವಾಮಿ-ಮೇ 26
- ವಿಜ್ಞಾನಿ, ಇಂಜಿನಿಯರ್ ಹಾಗೂ ಲೇಖಕ ಸುಧೀಂದ್ರ ಹಾಲ್ದೊಡ್ಡೇರಿ -ಜು. 2
- ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್- ಮೇ 14
- ಕೃಷಿ ವಿಜ್ಞಾನಿ ಡಾ. ಎಂ. ಮಹದೇವಪ್ಪ-ಮಾ. 6
- ಪ್ರಖ್ಯಾತ ವೈದ್ಯೆ ಹಾಗೂ ಲೇಖಕಿ ಡಾ. ಎಚ್. ಗಿರಿಜಮ್ಮ-ಆ. 17
- ಕುಣಿಗಲ್ ಯೋಗವನ ಬೆಟ್ಟಗಳ ಸ್ಥಾಪಕ, ಆಯುರ್ವೆದ ಪಂಡಿತರಾಗಿದ್ದ ಶ್ರೀ ಕಪರ್ದಿ ಸಿದ್ದಲಿಂಗ ಸ್ವಾಮೀಜಿ- ಜ.2
- ಬೆಂಗಳೂರಿನ ಅಲ್ ಅಮೀನ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ, ಶಿಕ್ಷಣತಜ್ಞ ಡಾ.ಮುಮ್ತಾಜ್ ಅಹ್ಮದ್ ಖಾನ್- ಮೇ 28
(ಬರಹ: ರಾಜಶೇಖರ ಜೋಗಿನ್ಮನೆ, ರಮೇಶ ದೊಡ್ಡಪುರ)