ನ್ಯೂಸ್

ಯಶ್​​ ಅಭಿನಯದ 'ರಾಮಯಾಣ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ! ದೀಪಾವಳಿ ಹಬ್ಬಕ್ಕೆ Ramayana ಸಿನಿಮಾ ಧಮಾಕಾ

ಮುಂಬೈ: ನಿತೇಶ್​ ತಿವಾರಿ ನಿರ್ದೇಶನದ ಬಹುನಿರಿಕ್ಷೀತ ಸಿನಿಮಾ ರಾಮಯಾಣ ( Ramayana ).ಈ ಚಿತ್ರದಲ್ಲಿ ರಣಬೀರ್ ಕಪೂರ್​, ಯಶ್, ಸಾಯಿ ಪಲ್ಲವಿ ಮುಂತಾದವರು ನಟಿಸುತ್ತಿದ್ದಾರೆ. ಈಗ ಈ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ.

ಈ ಕುರಿತು ನಿರ್ಮಾಪಕ ಮಲ್ಹೋತ್ರ ತಮ್ಮ ಇನ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ರಾಮಯಾಣ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಮೇಲೆ ಬರಲಿದ್ದು, 2026ರ ದೀಪಾವಳಿಗೆ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್​ ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಎರಡನೇ ಪಾರ್ಟ್​ ರಿಲೀಸ್ ಆಗಲಿದೆ.

ಉರಿಯುತ್ತಿರುವ ಬಾಣವು ಆಕಾಶದತ್ತ ಚಿಮ್ಮುತ್ತಿರುವುದನ್ನು ಪೋಸ್ಟ್​ನಲ್ಲಿ ಕಾಣಬಹುದು. ಇದರ ಜತೆಗೆ ಸಿನಿಮಾ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. '' 5000 ವರ್ಷಗಳಿಂದ ಶತಕೋಟಿ ಹೃದಯಗಳನ್ನು ಆಳಿದ ಈ ಮಹಾಕಾವ್ಯವನ್ನು ದೊಡ್ಡ ಪರದೆಯ ಮೇಲೆ ತರಲು ನಾನು ಅನ್ವೇಷಣೆಯನ್ನು ಪ್ರಾರಂಭಿಸಿದೆ. ಈ ಹಿನ್ನೆಲೆ ನಮ್ಮ ತಂಡಗಳು ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ತೆರೆ ಮೇಲೆ ಸುಂದರವಾಗಿ ಮೂಡಿಬರಲಿದ್ದು, ನಮ್ಮ ಇತಿಹಾಸ, ನಮ್ಮ ಸತ್ಯ, ನಮ್ಮ ಸಂಸ್ಕೃತಿ, ನಮ್ಮ ಪವಿತ್ರ ಪರಂಪರೆಯನ್ನು ಪ್ರಂಪಚದ್ಯಾಂತ ಜನರಿಗೆ ಪ್ರಸುತ್ತ ಪಡಿಸಲು ನಾನು ರೋಮಾಂಚನಗೊಂಡಿದ್ದೇನೆ.'' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ಗೆ ಹಲವು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕೆಲವರು'' ನಿಮ್ಮ ಚಿತ್ರತಂಡದಿಂದ ಆಮೋಘವಾಗಿ ಮೂಡಿಬರಲಿ, ಇಂತಹ ಸಿನಿಮಾವನ್ನು ತೆರೆಗೆ ತರುತ್ತಿರುವ ನಿಮಗೆ ಧನ್ಯವಾದಗಳು, ಈ ಚಿತ್ರ ನೋಡಲು ಕಾಯುತ್ತಿರುವೆ. ನಿಮಗೆ ಈ ಬಾರಿ ಯಶಸ್ಸು ಸಿಗಲಿ'' ಎಂದು ಕಾಮೆಂಟ್​ಗಳು ಬರುತ್ತೀವೆ.

ವರದಿಗಳ ಪ್ರಕಾರ, ರಾಮಯಾಣ ಚಿತ್ರದಲ್ಲಿ ನಾಯಕ ನಟನಾಗಿ ರಣಬೀರ್​ ಕಪೂರ್ ಅಭಿನಯಿಸಲಿದ್ದು, ರಾಮನ ಪಾತ್ರ ಮಾಡಲಿದ್ದಾರೆ. ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈಗಾಗಲೇ ರಾವಣನ ಪಾತ್ರ ಕುರಿತು ಯಶ್​ ಖಚಿತಪಡಿಸಿದ್ದು, ರಾವಣನಾಗಿ ರಾಕಿಂಗ್​ಸ್ಟಾರ್​ ಆರ್ಭಟಿಸಲಿದ್ದಾರೆ. ಲಾರಾ ದತ್ತ, ಸನ್ನಿ ಡೀಯೊಲ್​, ಶೀಬಾ ಚಡ್ಡಾ ಸೇರಿದಂತೆ ಆನೇಕರು ಈ ಚಿತ್ರದಲ್ಲಿ ನಟಿಸಲಿದ್ದಾರೆ.