ಮುಂಬೈ: ಯಶ್ ( Yash ) ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಮೂಲಕವಾಗಿ ಸಖತ್ ಸಕ್ಸಸ್ ಕಂಡಿರುವ ನಟ. ನ್ಯಾಷನಲ್ ಲೇವಲ್ನಲ್ಲಿ ಹೆಸರು ಮಾಡಿರುವ ನಟ ಇದೀಗ ಖಾಸಗಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮುಂದಿನ ಸಿನಿಮಾ ಹಾಗೂ ಪರ್ಸನಲ್ ಲೈಫ್ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ನಾನು ಕಂಡ ಕನಸುಗಳನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಯಾರೂ ಅವುಗಳನ್ನು ಸಾಧಿಸುವ ಬಗ್ಗೆ ನಂಬಿಕೆ ಇಡದಿದ್ದರೂ, ಕೇವಲ ನನ್ನ ಕುಟುಂಬ, ಅದರಲ್ಲೂ ವಿಶೇಷವಾಗಿ ಪತ್ನಿ ರಾಧಿಕಾ ಪಂಡಿತ್ ಅವರ ದೃಢವಾದ ಬೆಂಬಲದಿಂದಾಗಿ ನಾನು ಇದನ್ನು ಸಾಧಿಸಲು ಸಾಧ್ಯವಾಯ್ತು ಎಂದಿದ್ದಾರೆ.
ರಾಧಿಕಾಳನ್ನು ಸಂಗಾತಿಯನ್ನಾಗಿ ಪಡೆದಿರುವುದು ನನ್ನ ಅದೃಷ್ಟ ಯಾಕಂದ್ರೆ ತಾನು ಅಂದುಕೊಂಡಷ್ಟು ಸರಳ ವ್ಯಕ್ತಿಯಲ್ಲ. ರಾಧಿಕಾ ನಿರೀಕ್ಷಿಸೋದು ಕೇವಲ ‘ಗಮನ ಹಾಗೂ ಸಮಯ’. ಕೆಜಿಎಫ್ ಹಾಗೂ ಟಾಕ್ಸಿಕ್ ಎರಡೂ ಸಿನಿಮಾಗಳಿಗೆ ಗಮನ ಕೊಡಬೇಕಾಗಿರುವುದರಿಂದ, ಬಿಡುವಿಲ್ಲದ ಕೆಲಸದ ನಡುವೆ ಇವೆರಡನ್ನೂ ಕೊಡೋದು ಕೊಂಚ ಕಷ್ಟ ಎಂದಿದ್ದಾರೆ.
ರಾಧಿಕಾ ನನ್ನ ನಡೆ ಹಿಂದಿನ ಉದ್ದೇಶವನ್ನು ಎಂದಿಗೂ ಪ್ರಶ್ನಿಸದ ಕಾರಣ ವೃತ್ತಿಜೀವನದ ‘ಹುಚ್ಚು’ ನಿರ್ಧಾರಗಳನ್ನು ತೆಗೆದುಕೊಳ್ಳುಲು ಸಾಧ್ಯವಾಯ್ತು. ರಾಧಿಕಾ ನನ್ನ ಹಿಂದಿನ ದೊಡ್ಡ ಶಕ್ತಿ ಮತ್ತು ನಾನು ಕೆಜಿಎಫ್ ಸಿನಿಮಾಗಾಗಿ ಸಾಕಷ್ಟು ಸಮಯ ತೆಗೆದುಕೊಂಡರೂ ನನ್ನ ಹಿಂದೆ ಗಟ್ಟಿ ಶಕ್ತಿಯಾಗಿ ನಿಂತಿದ್ದರು. ರಾಧಿಕಾರಂತಹ ಸಪೋರ್ಟ್ ಇರದಿದ್ದರೆ, ನನ್ನಂತಹ ಕ್ರೇಜಿ ವ್ಯಕ್ತಿಗೆ ಅಂದುಕೊಂಡ ಗುರಿ ಸಾಧಿಸಲು ಎಲ್ಲವನ್ನೂ ಪಣಕ್ಕಿಡುವುದು ಕಷ್ಟವಾಗುತ್ತಿತ್ತು ಎಂದಿದ್ದಾರೆ ಯಶ್.
ನನ್ನ ಕುಟುಂಬದಿಂದ ನನಗೆ ಯಾವುದೇ ಒತ್ತಡವಿಲ್ಲ. ನಾನು ಬಯಸಿದ ರೀತಿಯಲ್ಲಿ ಕೆಲಸಗಳನ್ನು ಮಾಡಲು ಅದರಲ್ಲೂ ವಿಶೇಷವಾಗಿ ನಾನು ಇದನ್ನು ಖುಷಿಯಿಂದ ಮಾಡುವುದನ್ನಷ್ಟೇ ಅವರು ಬಯಸುತ್ತಾರೆ ಎಂದಿದ್ದಾರೆ ಯಶ್.