ರಾಧಿಕಾ-ಯಶ್ ಅವರ ಮಗ ಯಥರ್ವ್ ಇಂದು ತಮ್ಮ ಮೂರನೇ ಹುಟ್ಟುಹಬ್ಬದ ಆಚರಣೆ.
ಅಕ್ಟೋಬರ್ 30ಕ್ಕೇ ಯಥರ್ವನಿಗೆ 3 ವರ್ಷ ತುಂಬಿದೆ.
ಮಗನ ಹುಟ್ಟುಹಬ್ಬವನ್ನು ರಾಕಿಂಗ್ ದಂಪತಿ ಇಂದು ಆಚರಿಸಲಿದ್ದು, ಇದೀಗ ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಧಿಕಾ ಶೇರ್ ಮಾಡಿದ ವಿಡಿಯೋಗೆ My precious baby boy.. U never fail to make me feel special. Thank you for choosing me to be your mama! Happy birthday Yatharv love you always ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿದೆ.
ಯಥರ್ವ್ ಈ ವಿಡಿಯೋದಲ್ಲಿ ರಾಧಿಕಾಗೆ ಹೂ ಮುಡಿಸುತ್ತಾನೆ, ನಂತರದಲ್ಲಿ ರಾಧಿಕಾ ಮಗನಿಗೆ ಮುತ್ತೊಂದನ್ನ ಕೊಟ್ಟಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಜತೆಗೆ ಹೂ ಮುಡಿಸಿದ ನಂತರ ಅದು ಸರಿಯಾಗಿ ಇದೆಯೋ ಇಲ್ಲವೂ ಅನ್ಬನೋದನ್ನು ಒಮ್ಮೆ ಪರಿಸೀಲಿಸಿದ್ದಾನೆ
ಜೂನಿಯರ್ ರಾಕಿಂಗ್ ಸ್ಟಾರ್ ಯರ್ಥವ್ ಮೊದಲ ಹುಟ್ಟುಹಬ್ಬವನ್ನು ಜೋರಾಗಿಯೇ ಸಂಭ್ರಮಿಸಲಾಗಿತ್ತು. ಗೋವಾದ ಕಡಲ ತೀರದಲ್ಲಿರುವ ಯಾಚ್ನಲ್ಲಿ ಯಥರ್ವ್ ಯಶ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಅದರ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಈ ವರ್ಷ ಯಥರ್ವ್ ತಮ್ಮ ಮೂರನೇ ರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳಲಿದ್ದಾರೆ.
ಮುದ್ದಿನ ಮಗ ಯಥರ್ವ್ ತುಂಟಾಟದ ವಿಡಿಯೋಗಳನ್ನ ರಾಧಿಕಾ ಆಗಾಗಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರ್ತಾರೆ.
ಯಶ್ ಸಿನಿಮಾ ಅಂತ ಎಷ್ಟೇ ಬ್ಯುಸಿ ಇದ್ದರೂ, ಕುಟುಂಬಕ್ಕೆ ಸಮಯ ನೀಡ್ತಾರೆ. ರಾಧಿಕಾ ಪಂಡಿತ್ ಜೊತೆ ಆಗಾಗ ಟ್ರಿಪ್ ಹೋಗ್ತಾರೆ. ಮಕ್ಕಳ ಜೊತೆಯೂ ಸಮಯ ಕಳೆಯುತ್ತಾರೆ. ಎರಡನ್ನೂ ಸಮವಾಗಿ ನಿಭಾಯಿಸುತ್ತಾರೆ. ಐರಾ, ಯಥರ್ವ್‍ನಿಗೆ ಅಪ್ಪನೇ ಪ್ರಪಂಚ. ಅಪ್ಪನ ಜೊತೆ ಹೆಚ್ಚು ಕಾಲ ಕಳೆಯಲು ಇಷ್ಟ ಪಡ್ತಾರೆ.