ನ್ಯೂಸ್

ರೆಟ್ರೋ ಸ್ಟೈಲ್​ನಲ್ಲಿ ಎಂಟ್ರಿ ಕೊಟ್ಟ ಯಶ್! ಹೇಗಿದೆ ನೋಡಿ ‘ಟಾಕ್ಸಿಕ್’ ಗ್ಲಿಂಪ್ಸ್...Toxic Glimpse

Toxic Glimpse: ಕನ್ನಡದ ಸ್ಟಾರ್  ನಟ ಯಶ್ ಬ್ಲಾಕ್​ ಬಾಸ್ಟರ್ ಹಿಟ್​​ ಸಿನಿಮಾ ಕೆಜಿಎಫ್  ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು ಮಾತ್ರವಲ್ಲದೆ  ಕನ್ನಡ ಚಿತ್ರರಂಗಕ್ಕೆ ಹೊಸ ಕೀರ್ತಿ ತಂದರು. ಯಶ್​ ಅವರು ಮುಂದಿನ ಸಿನಿಮಾ ಟಾಕ್ಸಿಕ್  ಚಿತ್ರದ ಗ್ಲಿಂಪ್ಸ್​ನ ರಿಲೀಸ್ ಮಾಡಲಾಗಿದೆ.

ಕೆಜಿಎಫ್‌ನ ಎರಡೂ ಭಾಗಗಳು ದೊಡ್ಡ ಯಶಸ್ಸನ್ನು ಕಂಡವು ಮತ್ತು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.  ಕೆಜಿಎಫ್ ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಹಾಗೂ ಕನ್ನಡ ಪ್ರೇಕ್ಷಕರು ಕಾಯುತ್ತಿದ್ದರು. ಇತ್ತೀಚೆಗಷ್ಟೇ ಕೆಜಿಎಫ್ ನಂತರ ಯಶ್ ಮುಂದಿನ ಸಿನಿಮಾ ಟಾಕ್ಸಿಕ್ ಎಂದು ಘೋಷಿಸಿದ್ದರು.

ಕೆವಿಎನ್ ಪ್ರೊಡಕ್ಷನ್ಸ್‌ನಲ್ಲಿ ಗೀತು ಮೋಹನ್‌ದಾಸ್ ನಿರ್ದೇಶನದ ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್. ಯಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಈ ಚಿತ್ರದ ಒಂದು ಸಣ್ಣ ನೋಟ ಬಿಡುಗಡೆಯಾಗಿದೆ. ಯಶ್ ಟಾಕ್ಸಿಕ್ ನ ಝಲಕ್ಗಳನ್ನು ನೀವೂ ನೋಡಿ.

ಯಶ್ ಅವರಿಗೆ ಇಂದು (ಜನವರಿ 8) ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ದಿನದಂದು ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಪ್​ಡೇಟ್ ಸಿಗಲಿದೆ ಎಂದು ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಅಪ್​ಡೇಟ್ ಕೊಟ್ಟಿತ್ತು. ಆ ಸಮಯ ಈಗ ಸಮೀಪಿಸಿದೆ. ಈ ಚಿತ್ರದ ಗ್ಲಿಂಪ್ಸ್​ನ ರಿಲೀಸ್ ಮಾಡಲಾಗಿದೆ.

ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಹೆಂಡದ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ.