ನ್ಯೂಸ್

Yash: 'ರಾಮಾಯಣ'ದ ರಾವಣನೂ ನಾನೇ, ಕೋ ಪ್ರೊಡ್ಯೂಸರ್ ನಾನೇ : ಯಶ್​​

ಮುಂಬೈ:  ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿರುವ ಯಶ್ ( Yash )​ ಅವರು ರಾಮಾಯಣದಲ್ಲಿ ರಾವಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಯೊಂದು ಕೆಲವು ದಿನಗಳಿಂದ ಇದೆ. ರಾವಣನ ಪಾತ್ರವನ್ನು ಯಶ್​​ನಿರ್ವಹಿಸುತ್ತಿದ್ದಾರಾ? ರಾಮಾಯಣವನ್ನು ತಾವು ನಿರ್ಮಾಣ ಮಾಡುತ್ತಿರುವುದೇಕೆ ಎಂದು ಯಶ್​​ ಹೇಳಿದ್ದಾರೆ.

ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾ ರಾಮಾಯಣದಲ್ಲಿ ನಟ ಯಶ್ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ನಿತೇಶ್ ತಿವಾರಿ ನಿರ್ದೇಶದ ರಾಮಾಯಣ ಸಿನಿಮಾದಲ್ಲಿ ರಾಕಿಂಗ್​ ಸ್ಟಾರ್​ ಯಶ್, ರಾವಣನ ಪಾತ್ರದಲ್ಲಿ ಮಿಂಚಲಿದ್ದಾರೆ. ಸಾಯಿ ಪಲ್ಲವಿ ಸೀತೆಯಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನುಪಮಾ ಚೋಪ್ರಾ ಜೊತೆ ಈ ಸಂದರ್ಶನದಲ್ಲಿ ಮಾತನಾಡಿರುವ ಯಶ್, ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದ ವಿಎಫ್‌ಎಕ್ಸ್ ಕೆಲಸಕ್ಕೆ ನಾನು ಲಾಸ್ ಏಂಜಲೀಸ್‌ನಲ್ಲಿ ಇದ್ದೇನು ಈ ವೇಳೆ ಡಿಎನ್‌ಇಜಿ ಮತ್ತು ಪ್ರೈಮ್ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಭೇಟಿಯಾಗಿದ್ದೇನು. ಈ ವೇಳೆ ರಾಮಾಯಣ ಸಿನಿಮಾಕ್ಕೆ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವುದು ಗೊತ್ತಾಯ್ತು. ನನ್ನಗೆ ಅವರ ಹೊಸತನ ಇಷ್ಟವಾಯ್ತು ನನ್ನ ಅವದು ಒಂದೇ ಎನ್ನುವ ಭಾವನೆ ನನಗೆ ಈ ಮೊದಲ ಭೇಟಿಯಲ್ಲಿಯೇ ಬಂತು ಈ ಕಾರಣಕ್ಕೆ ನಾನು ಈ ಚಿತ್ರದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಹಿಂಜರಿಕೆಯಿಂದಲೇ ನಮಿತ್ ನೀವು ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ಮಾಡಬಹುದಾ? ಎಂದು ನನ್ನನ್ನೂ ಕೇಳಿದರು ಆಗ ನಾನು ಪಾತ್ರವನ್ನು ಪಾತ್ರದಂತೆ ಪರಿಗಣಿಸಿ ಒಪ್ಪಿಗೆ ನೀಡಿದ್ದೇನು. ಇಂತಹ ಚಿತ್ರಕ್ಕೆ ಎಲ್ಲರು ಸ್ಟಾರ್‌ಡಮ್‌ನ ಪಕ್ಕಕ್ಕೆ ಇಟ್ಟು ಕೈ ಜೋಡಿಸಬೇಕು, ಯೋಜನೆಗಳನ್ನು ನಿರೂಪಿಸಬೇಕು ಎಂದಿದ್ದೆ ಎಂದು ಹೇಳಿದ್ದಾರೆ.

‘ರಾಮಾಯಣ ಚಿತ್ರದಲ್ಲಿ ನಟಿಸೋಕೆ ನನಗೆ ಆಫರ್ ಕೊಟ್ಟರು. ನಟನಾಗಿ ರಾವಣ ಪಾತ್ರ ನನಗೆ ಸಖತ್ ಎಗ್ಸೈಟ್​ಮೆಂಟ್ ಕೊಡುತ್ತದೆ. ನಾನು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ ಯಶ್.

ರಣ್ಭೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಆರಂಭದಿಂದಲೂ ಹೆಚ್ಚೆಚ್ಚು ಸದ್ದು ಮಾಡುತ್ತಿರುವುದು ಯಶ್ ಕಾರಣಕ್ಕೆ. ಅದಕ್ಕೆ ಯಶ್ ಈ ಚಿತ್ರದ ಸಹ ನಿರ್ಮಾಪಕ ಅನ್ನುವುದು ಒಂದು ಕಾರಣವಾದರೆ, ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.