ನ್ಯೂಸ್

ಹಿಂದೂ ಅಥವಾ ಮುಸ್ಲಿಂ.. ಮನೆ ಹುಡುಕಾಟದಲ್ಲಿರುವ ನಟಿಗೆ ಧರ್ಮದ ಪ್ರಶ್ನೆ?; ಯಾಮಿನಿ ಮಲ್ಹೋತ್ರಾ ಹೇಳಿದಿಷ್ಟು | Yamini Malhotra

ಮುಂಬೈ: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 18' ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ನಟಿ ಯಾಮಿನಿ ಮಲ್ಹೋತ್ರಾ ತಾನು ಎದುರಿಸುತ್ತಿರುವ ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿ ವಾಸಕ್ಕೆ ಮುಂಬೈನಲ್ಲಿ ಮನೆಯನ್ನು ಹುಡುಕುತ್ತಿದ್ದಾರೆ. ಆದರೆ ನಟಿ ಎಂಬ ಕಾರಣಕ್ಕೆ ಜನರು ಅವರಿಗೆ ಮನೆ ನೀಡಲು ಸಿದ್ಧರಿಲ್ಲ ಎಂದು ತನ್ನ ಅಳಲು ತೊಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್​​ನಲ್ಲಿ, ಸ್ನೇಹಿತರೇ, ನಾನು ನಿಜವಾಗಿಯೂ ನಿರಾಶಾದಾಯಕವಾಗಿರುವ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ. ನಾನು ಮುಂಬೈಯನ್ನು ಎಷ್ಟು ಪ್ರೀತಿಸುತ್ತೇನೆ, ಇಲ್ಲಿ ಮನೆ ಹುಡುಕುವುದು ಅಷ್ಟೇ ಕಷ್ಟ. ಮನೆ ಹುಡುಕುವಾಗ ನೀನು ಹಿಂದೂವೋ ಅಥವಾ ಮುಸಲ್ಮಾನರೋ.. ನೀವು ಗುಜರಾತಿಯೋ ಅಥವಾ ಮಾರ್ವಾಡಿಯೋ? ಎಂಬಂತಹ ಪ್ರಶ್ನೆಗಳನ್ನು ನನಗೆ ಕೇಳಲಾಯಿತು. ನಾನು ನಟಿ ಎಂದು ಕೇಳಿದ ತಕ್ಷಣ ಜನರು ನನಗೆ ಮನೆ ನೀಡುವುದನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದ್ದಾರೆ ಎಂದು ಬರೆದಿದ್ದಾರೆ.

ನಾನು ನಟಿ ಎಂಬ ಕಾರಣಕ್ಕೆ ನಾನು ಇಲ್ಲಿ ಮನೆ ಪಡೆಯಲು ಅರ್ಹನಲ್ಲವೇ?. 2025ರಲ್ಲಿಯೂ ಈ ಪ್ರಶ್ನೆಗಳು ಇನ್ನೂ ಅಸ್ತಿತ್ವದಲ್ಲಿವೆ ಎಂಬುದು ಆಶ್ಚರ್ಯಕರವಾಗಿದೆ. ಕನಸುಗಳು ಷರತ್ತುಗಳೊಂದಿಗೆ ಬಂದರೆ, ನಾವು ಅದನ್ನು ಕನಸಿನ ನಗರ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದ್ದಾರೆ.

ಯಾಮಿನಿ ಮಲ್ಹೋತ್ರಾ 'ಬಿಗ್ ಬಾಸ್ 18' ಕ್ಕಿಂತ ಮೊದಲು ಜನಪ್ರಿಯ ಧಾರವಾಹಿಗಳಾದ 'ಗಮ್ ಹೈ ಕಿಸಿ ಕೆ ಪ್ಯಾರ್ ಮೇ' ಮತ್ತು 'ಮೈ ತೇರಿ ತು ಮೇರಾ'ನಲ್ಲಿ ಕೆಲಸ ಮಾಡಿದ್ದಾರೆ.(ಏಜೆನ್ಸೀಸ್​​)