ಉಡುಪಿ: ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿ ಬಾರೀ ಸುದ್ದಿಯಾಗಿತ್ತು. ಇದೀಗ ಅದೇ ರೀತಿಯ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ. ಯಕ್ಷಗಾನ ಕಲಾವಿದರೊಬ್ಬರ ಮೇಲೆ ದೈವ ಆವಾಹನೆಯಾಗಿರುವ ವಿಡಿಯೋ ವೈರಲ್ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಬಡಗುತಿಟ್ಟುವಿನ ಪ್ರಸಿದ್ಧ ಹಟ್ಟಿಯಂಗಡಿ ಮೇಳದಿಂದ ದೈವದ ಮಹಿಮೆಗೆ ಸಂಬಂಧಿಸಿದ ಪ್ರಸಂಗದ ಯಕ್ಷಗಾನ ನಡೆಯುತ್ತಿತ್ತು. ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರು ದೈವದ ವೇಷ ಧರಿಸಿ, ದೀವಟಿಕೆ ಹಿಡಿದುಕೊಂಡು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶಿಸುತ್ತಿದ್ದರು. ಆ ವೇಳೆ ಅವರ ಮೈ ಮೇಲೆ ದೈವ ಆವಾಹನೆ ಆಗಿದೆ. ರಂಗಸ್ಥಳ ಏರುವುದಕ್ಕೂ ಸಲ್ವ ಮುನ್ನ ಆವಾಹನೆ ಆಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ದೈವ ಆವಾಹನೆಯಾಗುತ್ತಿದ್ದಂತೆಯೇ ದೀವಟಿಕೆ ಹಿಡಿದುಕೊಂಡಿದ್ದ ಸಹಾಯಕ, ದೀವಟಿಗೆಯನ್ನು ಕಲಾವಿದನಿಂದ ಎಳೆದು ತೆಗೆದುಕೊಂಡಿದ್ದಾರೆ. ಈ ಘಟನೆಯನ್ನು ಸಾಕಷ್ಟು ಜನರು ಕಣ್ಣು ತುಂಬಿಕೊಂಡಿದ್ದು, ಜಿಲ್ಲೆಯಾದ್ಯಂತ ಅದರದ್ದೇ ಚರ್ಚೆ ನಡೆಯುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ