ರಾಣೆಬೆನ್ನೂರ: ತಾಲೂಕಿನ ಯಕ್ಲಾಸಪುರ ಗ್ರಾಮದ ಬಳಿ ಚಿರತೆಯೊಂದು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಬಳಿಯಿರುವ ಅರಣ್ಯ ಪ್ರದೇಶದ ಅಂಚಿನ ರಸ್ತೆಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಲ್ಲದೆ ಇದು ಹೆಣ್ಣು ಚಿರತೆಯಾಗಿದ್ದು ಮರಿಗಳನ್ನು ಮಾಡಿರುವ ಸಂಶಯವಿದೆ. ಆದ್ದರಿಂದ ಗ್ರಾಮದ ಸುತ್ತಲಿನ ರಸ್ತೆಗಳಲ್ಲಿ ಚಿರತೆ ಕಳೆದ ಹದಿನೈದು ದಿನದಿಂದ ಕಾಣಿಸಿಕೊಳ್ಳುತ್ತಿದೆ.
ಹೀಗಾಗಿ ಗ್ರಾಮದ ರೈತರು ಜಮೀನುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಬೋನ್ ಇಡುವ ಮೂಲಕ ಚಿರತೆಗಳನ್ನು ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.