ನ್ಯೂಸ್

ಯದುವೀರ್ -ತ್ರಿಷಿಕಾ ದಂಪತಿ ಪುತ್ರನಿಗೆ ತೊಟ್ಟಿಲು ಶಾಸ್ತ್ರ...cradle ceremony

ಮೈಸೂರು: (cradle ceremony ) ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ತ್ರಿಷಿಕಾ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, 2017ರ ಡಿಸೆಂಬರ್ 6 ರಂದು ಆದ್ಯವೀರ್ ಅವರು ಜನಿಸಿದ್ದರು. ಇದೀಗ 2ನೇ ಪುತ್ರನಿಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ‌ ದೇವಸ್ಥಾನದಲ್ಲಿ ತೊಟ್ಟಿಲು ಶಾಸ್ತ್ರ ನೇರವೆರಿದೆ.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದೇವಿ ದಂಪತಿಯ ಕಿರಿಯ ಪುತ್ರನಿಗೆ ತೊಟ್ಟಿಲುಶಾಸ್ತ್ರದ ಸಂಭ್ರಮ ನೆರವೇರಸಲಾಗಿದೆ. ಇದಕ್ಕೂ ಮೊದಲು ರಾಜವಂಶಸ್ಥರು ಚಾಮುಂಡಿದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ದೇವಿಗೆ ಪೂಜೆ ಕಾರ್ಯಗಳೆಲ್ಲ ಮುಗಿದ ಮೇಲೆ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಮಾಡಿದರು. ಇದಾದ ಮೇಲೆ ತೊಟ್ಟಿಲು ಶಾಸ್ತ್ರ ಮಾಡಲಾಯಿತು. ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು.