ನ್ಯೂಸ್

ಮಾರಕ ಕೊರೊನಾ ವೈರಸ್​ ಪೀಡಿತರಿಗೆ ಆಮೆ ಮಾಂಸದೂಟ!; ಮಾಧ್ಯಮಗಳಿಗೆ ವಿಡಿಯೋ ಬಿಡುಗಡೆ ಮಾಡಿದ ರೋಗಿ

ವುಹಾನ್​: ಕೊರೊನಾ ವೈರಸ್ ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತಿದೆ. ಸಾವಿರಾರು ಮಾರಣಾಂತಿಕ ಕಾಯಿಲೆಗೆ ತುತ್ತಾದ ನಂತರ ವುಹಾನ್‌ನ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಭೋಜನಕ್ಕೆ ಆಮೆ ಮಾಂಸ ನೀಡಲಾಗುತ್ತಿದೆ.

"ಇವತ್ತಿನ ಊಟದಲ್ಲಿ ಆಮೆ ಮಾಂಸ ಇದೆ" ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯೊಬ್ಬ ವಿಡಿಯೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾನೆ.

ಮಾರಕ ವೈರಸ್​ ಸೋಂಕಿನಿಂದ 638 ಮಂದಿ ಮೃತಪಟ್ಟಿರುವುದು ಕಾಡು ಪ್ರಾಣಿಗಳಿಂದ. ಅದರಲ್ಲೂ ವಿಶೇಷವಾಗಿ ಬಾವಲಿ ಮತ್ತು ಹಾವುಗಳ ಸೇವನೆಯಿಂದ ಎಂಬುದು ತಜ್ಙರ ಅಭಿಮತ.

ಇಲ್ಲಿನ ವೈದ್ಯರ ಪ್ರಕಾರ ಪೆಂಗೋಲಿನ್​ಗಳ ಸೇವನೆಯಿಂದ ಕೊರೊನಾ ವೈರಸ್​ ಬೇಗ ಹರಡುತ್ತದೆ. ಆದ್ದರಿಂದ ಮೃದುವಾದ ಆಮೆ ಮಾಂಸ ಸೇವನೆ ಅಥವಾ ಜಿಯ ಯು ಎನ್ನುವ ಆಹಾರ ಸೇವನೆ ಸಾಂಪ್ರಾದಾಯಿಕವಾಗಿ ಒಳ್ಳೆಯದು. ಆಮೆ ಮಾಂಸದೊಳಗಿನ ಪ್ರೋಟೀನ್​ನಿಂದ ತುಂಬಿರುತ್ತದೆ, ಇದರಿಂದ ವೈರಸ್​ ಪೀಡಿತರ ಶೀಘ್ರ ಗುಣಮುಖರಾಗಬಹುದು ಎನ್ನುವುದು ಅವರ ಅಭಿಪ್ರಾಯ.

ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಹಿಳಾ ರೋಗಿಯೊಬ್ಬಳು ಸಹೋದರರೇ, ನೋಡಿ ನೀವು ಮುಂದಿನ ಸಾಲಿನಲ್ಲಿ ಹೋರಾಡುತ್ತಿದ್ದೀರಿ, ಮತ್ತು ನಾವು ನಿಮ್ಮೊಂದಿಗೆ ಮುಂದಿನ ಸಾಲಿನಲ್ಲೇ ಹೋರಾಟ ನಡೆಸಿದ್ದೇವೆ ಎನ್ನುತ್ತಾಳೆ.

ಇನ್ನು ಎರಡನೇ ರೋಗಿ, ಚಪ್ಪಲಿ, ಟವೆಲ್, ಟೂತ್‌ಪೇಸ್ಟ್ ಮತ್ತು ಟಾಯ್ಲೆಟ್ ಪೇಪರ್ ಸೇರಿ ವೈದ್ಯಕೀಯ ಕೇಂದ್ರವು ಅವನಿಗೆ ನೀಡಿದ ಜೀವನ ಅವಶ್ಯಕತೆಗಳನ್ನು ತೋರಿಸುತ್ತಾನೆ. ಮೂರನೆಯ ರೋಗಿ ಆಸ್ಪತ್ರೆಯ ಊಟವನ್ನು ಪರಿಚಯಿಸುತ್ತ ಇಂದಿನ ಊಟದಲ್ಲಿ ಮೃದುವಾದ ಆಮೆ ​​ಮಾಂಸವಿದೆ ಎನ್ನುತ್ತಾನೆ. (ಏಜೆನ್ಸೀಸ್​)