ನವದೆಹಲಿ: ಮಾರಕ ವೈರಸ್ ಕೊರೊನಾದ ಬಗ್ಗೆ 1981ರಲ್ಲಿ ಪ್ರಕಟವಾದ ಡೀನ್ ಕೂಂಟ್ಸ್ ಅವರು ಬರೆದ "ದಿ ಐಯ್ಸ್ ಆಫ್ ಡಾರ್ಕ್ನೆಸ್" ಎಂಬ ಕಾದಂಬರಿಯಲ್ಲಿ ಪ್ರಸ್ತಾಪವಾಗಿತ್ತು.
ಈ ಕಾದಂಬರಿಯಲ್ಲಿ ಬರುವಂತೆ ಚೀನಾದ ಸೇನಾಪಡೆಯ ಸಂಶೋಧನಾ ವಿಭಾಗ ಒಂದು ವೈರಸ್ನ್ನು ಸೃಷ್ಟಿಸುತ್ತದೆ. ಆ ವೈರಸ್ನ್ನು ಒಂದು ಜೈವಿಕ ಅಸ್ತ್ರವನ್ನಾಗಿ ಬಳಸಲಾಗುತ್ತದೆ ಎಂಬ ಅಂಶ ಪ್ರಕಟವಾಗಿತ್ತು. ಈ ವಿಷಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾದಂಬರಿಯ ಪುಟ 39ರಲ್ಲಿ, ವುಹಾನ್ನಲ್ಲಿರುವ ಸೇನಾಪಡೆಯ ಸಂಶೋಧನಾ ಕೇಂದ್ರ ವೈರಸ್ನ್ನು ಸೃಷ್ಟಿಸುತ್ತದೆ. ಅದಕ್ಕೆ ವುಹಾನ್ 400 ಎಂದು ಹೆಸರಿಸಲಾಗಿರುತ್ತದೆ ಎಂದು ಬರೆದಿದೆ.
ಇದನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಕೊರೊನಾ ವೈರಸ್ ಎಂಬ ಜೈವಿಕ ಶಸ್ತ್ರಾಸ್ತ್ರವನ್ನು ವುಹಾನ್ 400 ಎಂಬ ಹೆಸರಿನಲ್ಲಿ ಚೀನಾ ತಯಾರಿಸಿದೆಯೇ? ಈ ಪುಸ್ತಕ ಪ್ರಕಟಗೊಂಡಿರುವುದು 1981ರಲ್ಲಿ! ಎಂದು ಬರೆದಿದ್ದಾರೆ.
ಅಲ್ಲದೆ ಟ್ವೀಟ್ನಲ್ಲಿ ಆ ಪುಟದ ಒಂದು ಪ್ಯಾರಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೂರಾರು ಟ್ವೀಟಿಗರು ಬಗೆಬಗೆಯಾಗಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)