ನ್ಯೂಸ್

ಅಬ್ಬಾಬ್ಬ ಲಾಟ್ರಿ.. ಇದಪ್ಪಾ ಅದೃಷ್ಟ ಅಂದ್ರೆ .. ಅಂತ್ಯ ಕಾಲದ ವೃದ್ಧನಿಗೆ ಬಂದು ಕೋಟಿ ಕೋಟಿ ರೂ. ಜಾಕ್​ಪಾಟ್​! | Lottery

Lottery : ಅದೃಷ್ಟ ಎಂಬುಂದು ಯಾವಾಗ ಬಾಗಿಲು ತಟ್ಟುತ್ತದೆ ಎಂದು ಹೇಳುವುದು ಕಷ್ಟ. ಹೌದು, ಅಮೆರಿಕದ 81 ವರ್ಷದ ವ್ಯಕ್ತಿಯ ಜೀವನದ ಅಂತ್ಯದಲ್ಲಿ ಇದ್ದಕ್ಕಿದ್ದಂತೆ ಕೋಟ್ಯಾಧಿಪತಿಯಾದ್ದಾನೆ ಎಂದು ವರದಿಯಾಗಿದೆ.

ಇಲ್ಲಿನ ಉತ್ತರ ಕೆರೊಲಿನಾದ ವೃದ್ಧ ಡೆನ್ನಿಸ್ ಪಾರ್ಕ್ ಎಂಬ ವೃದ್ಧ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ಲಾಟರಿಯಲ್ಲಿ ಭಾರಿ ಬಹುಮಾನದ ಹಣವನ್ನು ಗೆದ್ದಿದ್ದಾರೆ. ಮೊದಲು ಖರೀದಿಸಿದ ಲಾಟರಿ ಟಿಕೆಟ್ 43 ಲಕ್ಷ ಗೆದ್ದರೆ, ಅದೇ ದಿನ ಖರೀದಿಸಿದ ಎರಡನೇ ಲಾಟರಿ ಟಿಕೆಟ್ ಎರಡು ಪಟ್ಟು ಬಹುಮಾನದ ಹಣವನ್ನು ಗೆದ್ದಿರುವ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ ಎಂದು ವರದಿಗಳು ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದು ತಮ್ಮ ಮಗಳೊಂದಿಗೆ ಗ್ರೀನ್ಸ್‌ಬೊರೊ ಪ್ರಾದೇಶಿಕ ಕಚೇರಿಗೆ ರೂ. ಲಾಟರಿಯಲ್ಲಿ ಗೆದ್ದ 43 ಲಕ್ಷ ರೂ.ಸಂಗ್ರಹಿಸಲು ಹೋಗಿದ್ದರು. ಇದೇ ವೇಳೆ ಇವರ ಹುಟ್ಟು ಹಬ್ಬಕ್ಕೆ ಮಗಳು ಮತ್ತೊಂದು ಲಾಟರಿ ಖರೀಸಿ ಕೊಟ್ಟಿದ್ದಾಳೆ. ಅದೃಷ್ಟ ಎಂಬಂತೆ ಅಂದೇ 86 ಲಕ್ಷ ರೂ. ಗೆದ್ದಿದ್ದಾರೆ.ಈ ಮೂಲಕ ಅವರ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಕೆರೊಲಿನಾದ ಮತ್ತೊಬ್ಬ ವ್ಯಕ್ತಿ ರಾಬರ್ಟ್ ಹೋಬನ್ ಎಂಬುವರು, 1,000 ರೂ. ಕೊಟ್ಟು ಲಾಟರಿ ಖರೀದಿಸಿದ ಇತನಿಗೆ 95 ಲಕ್ಷ ಬಹುಮಾನದ ಹಣ ಬಂದಿತ್ತು. ''ಕೆಲವು ದಿನಗಳ ಹಿಂದೆ ಕಂಡ ಕನಸು ಕೊನೆಗೂ ನನಸಾಯಿತು ಎಂದು ಅವರು ಹೇಳಿದ್ದರು.''(ಏಜೆನ್ಸೀಸ್​)