ನ್ಯೂಸ್

ಕಾಂಗ್ರೆಸ್​ ಮಾರ್ಗದರ್ಶಕರಾಗುವರೇ... ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್?!

rashmirhebbur

ನವದೆಹಲಿ : ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅವರ ಟಿಎಂಸಿಯನ್ನು ವಿಜಯ ಪಥದಲ್ಲಿ ನಡೆಸಿದ ಖ್ಯಾತಿಯ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್,​ ಕಾಂಗ್ರೆಸ್ ಸೇರುವ ಸೂಚನೆಗಳು ಬಂದಿವೆ. ಮಂಗಳವಾರದಂದು ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಅವರ ನಿವಾಸದಲ್ಲಿ ಕಿಶೋರ್​ ನಡೆಸಿದ 'ಮಹತ್ವದ ಮಾತುಕತೆ'ಯ ನಂತರ ಈ ಊಹೆಗಳು ಹರಿದಾಡುತ್ತಿವೆ.

ಜುಲೈ 13 ರಂದು ಸೋನಿಯಾ ಗಾಂಧಿ, ರಾಹಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂವರನ್ನೂ ಜೊತೆಯಾಗಿ ಪ್ರಶಾಂತ್ ಕಿಶೋರ್​ ಭೇಟಿ ಮಾಡಿದರು. ಇದು ಮಾಮೂಲಾಗಿ ನಡೆಯುವಂಥದ್ದಲ್ಲ. ಬರಲಿರುವ ಪಂಜಾಬ್​ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯುವುದರೊಂದಿಗೆ, 2024ರ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ಸನ್ನು ಸಜ್ಜುಗೊಳಿಸುವ 'ದೊಡ್ಡ ವಿಚಾರಗಳು' ನಿರ್ಧಾರವಾಗಿರಬಹುದು ಎನ್ನಲಾಗಿದೆ.

ಚುನಾವಣಾ ತಂತ್ರಗಾರರಾದ ಪ್ರಶಾಂತ್​ ಕಿಶೋರ್​ ಅವರನ್ನು ರಾಜಕೀಯ ಚಾಣಕ್ಯ ಎಂದೇ ಕರೆಯಲಾಗುತ್ತದೆ. ತಮ್ಮ ಸೇವೆಯನ್ನು ಪಡೆದ ಬಂಗಾಳದ ಟಿಎಂಸಿ ಮತ್ತು ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಪಕ್ಷಕ್ಕೆ ಚುನಾವಣೆಯಲ್ಲಿ ಭಾರೀ ಗೆಲುವು ಲಭ್ಯವಾದ ಹಿನ್ನೆಲೆಯಲ್ಲಿ ಅವರ ಮೌಲ್ಯ ಹೆಚ್ಚಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್​ನ ಮಾರ್ಗದರ್ಶಕರಾಗಿ ಕಿಶೋರ್​ ಪ್ರಮುಖ ಪಾತ್ರ ವಹಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು. (ಏಜೆನ್ಸೀಸ್)