ಮದ್ದೂರು: ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಪಟ್ಟಣದ ಕೋಟೆ ಬೀದಿಯಲ್ಲಿರುವ ರಾಯರ ಮಠದಲ್ಲಿ ಭಾನುವಾರ ಪೂರ್ವಆರಾಧನೆ, ಸೋಮವಾರ ಮಧ್ಯಾರಾಧನೆ ಹಾಗೂ ಮಂಗಳವಾರ ಉತ್ತರಾರಾಧನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರ ಪ್ರಸಾದ್ ತಿಳಿಸಿದರು.
ಭಾನುವಾರ ಪೂರ್ವಾರಾಧನೆ ಅಂಗವಾಗಿ ದೇಗುಲದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಒಳಗಾದರು ಎಂದರು.
ಸೋಮವಾರ ಮಧ್ಯಾರಾಧನೆ ಹಾಗೂ ಮಂಗಳವಾರ ಉತ್ತರಾರಾಧನೆ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ತೀರ್ಥ, ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಒಳಗಾಗಬೇಕೆಂದು ಸಂಘದ ಅಧ್ಯಕ್ಷ ರಾಮಚಂದ್ರ ಪ್ರಸಾದ್, ಕಾರ್ಯನಿರ್ವಾಹಕ ಮೋಹನ್, ನಿರ್ದೇಶಕರಾದ ಗುಂಡೂರಾವ್, ಸತ್ಯನಾರಾಯಣರಾವ್, ನಾಗೇಂದ್ರ, ವೆಂಕಟೇಶ್ ಮೂರ್ತಿ, ಕೆ.ಆರ್.ಮಂಜುನಾಥ್ ಮನವಿ ಮಾಡಿದ್ದಾರೆ.